ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದ ಕಲ್ಲಂಗುಟ್ ನಲ್ಲಿ ಅಂಗಡಿಯೊಂದಕ್ಕೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಡಿಜಿಟಲ್ ಬೋರ್ಡ್ ಅಳವಡಿಸಿದ್ದರಿಂದ ಸ್ಥಳೀಯರು ಅಂಗಡಿಗೆ ಮುತ್ತಿಗೆ ಹಾಕಿ ವಿರೋಧಿಸಿದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಕೆಲಕಾಲ ಈ ಭಾಗದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಲ್ಲಂಗುಟ್ ಹಡಪಡೆ ಎಂಬಲ್ಲಿ ವಿಸ್ಕಿ ಪೀಡಿಯ ಎಂಬ ಹೆಸರಿನ ವೈನ್ ಶಾಪ್ ಹರಿಯಾಣದ ರವಿ ಎಂಬ ವ್ಯಕ್ತಿಯ ಮಾಲೀಕತ್ವದ್ದಾಗಿತ್ತು. ಕಳೆದ ಸುಮಾರು ನಾಲ್ಕು ವರ್ಷಗಳಿಂದ, ಬಾಡಿಗೆ ಆಧಾರದ ಮೇಲೆ ವೈನ್ ಶಾಪ್ ನಡೆಸಲಾಗುತ್ತಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿತ್ ಭಾಟಿಯಾ ಹರಿಯಾಣ, ವಿಪಿನ್ ಪಹುಜ ಹರಿಯಾಣ, ವಿನಯ್ ಚಂದ್ರಾ ರಾವ್ ಕರ್ನಾಟಕ, ಕೃಷ್ಣ ಲಮಾಣಿ ಕರ್ನಾಟಕ, ಮನೋಜ್ ಕುಮಾರ್ ಬಿಹಾರ್, ಮೊಹಮ್ಮದ್ ಫರಹಾನ್ ಉತ್ತರ ಪ್ರದೇಶ್, ನೌಶದ್ ದೆಹಲಿ, ಮಹಮ್ಮದ್ ಶಬೇಜ ಉತ್ತರ ಪ್ರದೇಶ, ರಾಕೇಶ್ ದಾಸ್ ಉತ್ತರ ಪ್ರದೇಶ, ರವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಕ ಕಾರ್ಯ ಕೈಗೊಂಡಿದ್ದಾರೆ.
