ಸುದ್ಧಿಕನ್ನಡ ವಾರ್ತೆ
ಪಣಜಿ: ಮಾವಳಿಂಗ ಎಂಬಲ್ಲಿ ಎರಡೂವರೆ ವರ್ಷದ ಬಾಕಲಿಯ ಹತ್ಯೆ ಪ್ರಕರಣದಲ್ಲಿ ಗೋವಾ ಪೋಲಿಸರು ಕಾರ್ಯಾಚರಣೆ ನಡೆಸಿ ಕರ್ನಾಟಕದ ಬೆಂಗಳೂರಿನಿಂದ ಕೈಲಾಶ್ (21) ಎಂಬ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಗೋವಾದ ಬಿಚೋಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ 15 ದಿನಗಳ ಹಿಂದೆ ಗೋವಾದ ಮಾವಳಿಂಗ ಎಂಬ ಊರಿನಲ್ಲಿ ಎರಡೂವರೆ ವರ್ಷ ವಯಸ್ಸಿನ ಬಾಲಕಿಯ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಬಿಚೋಲಿ ಪೋಲಿಸರು ಕರ್ನಾಟಕದ ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
ಕಳೆದ ಅಕ್ಟೋಬರ್ 15 ರಂದು ಜನ್ಮ ನೀಡಿದ ತಾಯಿಯೇ ತನ್ನ ಎರಡೂವರೆ ವರ್ಷದ ಮಗುವಿನ ಹತ್ಯೆಗೆ ಕಾರಣೀಭೂತಳಾಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗೋವಾದ ಬಿಚೋಲಿ ಪೋಲಿಸರು ಬಾಲಕಿಯ ತಾಯಿ ನಾಗಮ್ಮಾ ರವಿ.ವಿ ಹಾಗೂ ಈಕೆಯ ಪ್ರಿಯಕರ ಎನ್ನಲಾದ ನಿತಿನ್ ಕುಮಾರ್ ಪೂಜಾರ (ಇಬ್ಬರೂ ಕರ್ನಾಟಕದವರು) ಈ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲಾಶ್ ಎಂಬ ಮತ್ತೊರ್ವ ಆರೋಪಿಯನ್ನು ಪೋಲಿಸರು ಬೆಂಗಳೂರಿನಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ.
