ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಖಿಲ ಭಾರತ ಟ್ಯಾಕ್ರೋ ಅಸೋಸಿಯೇಶನ್ ಅಧ್ಯಕ್ಷ ಯೋಗೇಂದ್ರ ಸಿಂಗ್ (42, ದೆಹಲಿ) ಹಾಗೂ ಕ್ರೀಡಾ ಪಟು ಅಂಕಿತ್ ಕುಮಾರ್ ಬಾಲಿಯನ್ (ಉತ್ತರಪ್ರದೇಶ) ಸಾವನ್ನಪ್ಪಿದ್ದಾರೆ.
ಸ್ಯಾಫೆಕ್ ಟ್ಯಾಕ್ರೊ ಸ್ಫರ್ಧೆಯ ಹಿನ್ನೆಲೆಯಲ್ಲಿ ಇಬ್ಬರೂ ಗೋವಾಕ್ಕೆ ಆಗಮಿಸಿದ್ದರು. ಅಕ್ಟೋಬರ್ 27 ರಂದು ಈ ಸ್ಫರ್ಧೆ ಪೂರ್ಣಗೊಂಡಿತ್ತು. ಆದರೆ ಸೋಮವಾರ ಮಧ್ಯರಾತ್ರಿಯ ವೇಳೆಗೆ ಬಾಂಬೋಲಿಂ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಈ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಕಾರಣವಾದ ರಾಹುಲ್ ಸರವದೆ ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಅತಿಯಾದ ವೇಗ ಹಾಗೂ ಇದರಿಂದಾಗಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
-ಸೋಮವಾರ ಮಧ್ಯರಾತ್ರಿಯ ವೇಳೆಗೆ ಬಾಂಬೋಲಿಂ ಬಳಿ ಈ ಅಪಘಾತ ಸಂಭವಿಸಿದೆ. ಪಣಜಿ ಭಾಗಕ್ಕೆ ತೆರಳುತ್ತಿದ್ದ ಟ್ಯಾಂಕರ್ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಪಣಜಿಯಿಂದ ಮಡಗಾಂವ ಬದಿಗೆ ತೆರಳುತ್ತಿದ್ದ ರೆಂಟ್ ಅ ಕಾರಿಗೆ ಡಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಕ್ರೀಡಾಪಟುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕ್ರೀಡಾ ಪಟುಗಳು ಗೋವಾದಲ್ಲಿ ಈ ರೀತಿ ಅಪಘಾತದಲ್ಲಿ ದುರ್ಮರಣವಾಗಿರುವುದಕ್ಕೆ ಗೋವಾದಲ್ಲಿ ಶೋಕ ವ್ಯಕ್ತವಾಗುತ್ತಿದೆ.
