ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಬಿಚೋಲಿಯ ಸಾರಮಾನಸ್ ಫೇರಿ ಪಾಯಿಂಟ್ ಬಳಿ ಸೋಮವಾರ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ನದಿಗೆ ಹಾರಿದ ಘಟನೆ ನಡೆದಿದೆ. ಆದರೆ ಅದೃಷ್ಠವಶಾತ್ ತ್ವರಿತ ರಕ್ಷಣಾ ಕಾರ್ಯದಿಂದಾಗಿ ಕಾರು ಚಾಲಕನ ಜೀವ ಉಳಿದಂತಾಗಿದೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯ ಕುರಿತು ಲಭ್ಯವಾಗಿರುವ ಮಾಹಿತಿಯ ಅನುಸಾರ- ಕಾರು ಚಾಲಕ ತನ್ನ ಕಾರನ್ನು ಫೇರಿ ಪಾಯಿಂಟ್ ಬಳಿ ತರುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ನದಿಗೆ ಹಾರಿದೆ ಎನ್ನಲಾಗಿದೆ.
ಕಾರು ನದಿಗೆ ಬೀಳುತ್ತಿದ್ದಂತೆಯೇ ಅಲ್ಲಿಯೇ ಇದ್ದ ಹಲವು ಯುವಕರು ರಕ್ಷಣಾ ಕಾರ್ಯಕ್ಕಾಗಿ ಕೂಡಕೇ ನದಿಗೆ ಹಾರಿದ್ದಾರೆ. ಸ್ಥಳೀಯರು ಕಾರಿನೊಳಗೆ ಸಿಲುಕಿದ್ದ ಕಾರು ಚಾಲಕನನ್ನು ಕಾರಿನಿಂದ ಹೊರ ತೆಗೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಚಾಲಕನಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎನ್ನಲಾಗಿದೆ. ಸ್ಥಳೀಯರ ರಕ್ಷಣಾ ಕಾರ್ಯದಿಂದಾಗಿ ಕಾರು ಚಾಲಕನ ಜೀವ ಉಳಿದಂತಾಗಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಬಿಚೋಲಿ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ನದಿಯಲ್ಲಿ ಮುಳುಗಿರುವ ಕಾರನ್ನು ಮೇಲೆತ್ತಲು ಕಾರ್ಯಾಚರಣೆ ರ್ಕಯಗೆತ್ತಿಕೊಳ್ಳಲಾಗಿದೆ.
