ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ಹಳದೋಣ ದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಲ್ಲಿನ ಶಾಲೆಯ ಆವರಣದಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಯುವತಿ ಒಬ್ಬಳೇ ರಾತ್ರಿ 12 ಗಂಟೆ ಸುಮಾರು ಸೇಂಟ್ ಥಾಮಸ್ ಶಾಲೆ ಆವರಣದಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ಸ್ಥಳೀಯ ಪೆÇಲೀಸರು(Police)  ಯುವತಿಯನ್ನು ವಿಚಾರಣೆಗಾಗಿ ಬಂಧಿಸಿದ್ದು, ತಾನು ಧ್ಯಾನ ಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ.

ಯುವತಿಯು ವಾಮಾಚಾರ ನಡೆಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿ ಒಬ್ಬಳೇ ಶಾಲೆಯ ಆವರಣದಲ್ಲಿ ಮಧ್ಯರಾತ್ರಿಯ ವೇಳೆ ಪಾಮಾಚಾರ ನಡೆಸುತ್ತಿರುವುದು ಕಂಡುಬಂದಿದೆ.

ಆತಂಕ ಕಾರ್ಯ ವಿಷಯವೆಂದರೆ ಯುವತಿಯು ವರ್ತುಲ ಆಕಾರದಲ್ಲಿ ರೇಖೆ ಎಳೆದು ಅದರಲ್ಲಿ ತಾನು ಕುಳಿತು ಸುತ್ತಲೂ ಮಾನವನ ಎಲುಬು , ಮೊಟ್ಟೆ, ಎಲೆ ಅಡಿಕೆ, ಮೇಣದಬತ್ತಿ ಹಚ್ಚಿ ತಾನು ಮಧ್ಯಭಾಗದಲ್ಲಿ ಕುಳಿತುಕೊಂಡಿದ್ದಳು. ಈ ಸಂದರ್ಭದಲ್ಲಿ ಸ್ಥಳೀಯರು ಬಂದು ಈಕೆಯನ್ನು ಪ್ರಶ್ನಿಸಿದ್ದರು. ನೀನು ಸ್ಥಳೀಯರಿಗೆ ವಾಮಾಚಾರಿ ಮಾಡುತ್ತಿದ್ದೀಯಾ ಎಂದು ತಿಳಿಯ ಜನರು ಈಕೆಗೆ ಪ್ರಶ್ನಿಸಿದ್ದರು.

ಆದರೆ ಈಕೆ ಸ್ಥಳೀಯರಿಗೆ ಯಾವುದೇ ಪ್ರತ್ಯುತ್ತರ ನೀಡಲಿಲ್ಲ. ಬದಲಾಗಿ ಸ್ಥಳೀಯರ ಮೇಲೆ ಯುವತಿ ಹಲ್ಲೆ ನಡೆಸಲು ಮುಂದಾಗಿದ್ದಳು ಎನ್ನಲಾಗಿದೆ.
ನಂತರ ಸ್ಥಳೀಯರು ಈಕೆ ವಿರುದ್ಧ ಪೆÇಲೀಸ್ ಠಾಣೆಗೆ ತರಲಿ ಮಾಹಿತಿ ನೀಡಿದರು. ಸ್ಥಳೀಯರು ಪೆÇಲೀಸ್ (Police) ಠಾಣೆಗೆ ತಿಳಿದಿದ್ದಾರೆ ಎಂಬ ಮಾಹಿತಿ ಲಭಿಸಿದ ತಕ್ಷಣ ಈ ವತಿಯು ಎಲ್ಲಾ ಸಾಹಿತ್ಯವನ್ನು ತನ್ನ ಬ್ಯಾಗು ಒಳಗೆ ತುಂಬಿದ ಸ್ಥಳದಿಂದ ಪರಾರಿ ಆಗಲು ಯತ್ನಿಸಿದಳು.

ಅಷ್ಟರಲ್ಲಿ ಪೆÇಲೀಸರು (Police) ಘಟನಾ ಸ್ಥಳಕ್ಕೆ ಆಗಮಿಸಿ ಯುವತಿಯನ್ನು ವಿಚಾರಣೆಗೆ ಕರೆದೊಯ್ದರು ಎನ್ನಲಾಗಿದೆ. ಆದರೆ ಯುವತಿಯು ತಾನು ಧ್ಯಾನ ಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಪೆÇಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.