ಸುದ್ದಿ ಕನ್ನಡ ವಾರ್ತೆ
ಪಣಜಿ: ಕರ್ನಾಟಕದ ಹುಬ್ಬಳ್ಳಿ ಯಿಂದ ಗೋವಾಕ್ಕೆ ತರುತ್ತಿದ್ದ 800 ಕೆಜಿ ಗೋಮಾಂಸವನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕ ಗೋವಾ ಗಡಿ ಭಾಗವಾದ ಮೂಲೆಂ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಹುಬ್ಬಳ್ಳಿ ಯಿಂದ ವಾಹನ ಒಂದರಲ್ಲಿ ಎಂಟುನೂರು ಕೆಜಿ ಗೋಮಾಂಸವನ್ನು ಗೋವಾಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಕರ್ನಾಟಕದ ಹುಬ್ಬಳ್ಳಿ ಯಿಂದ ಅಕ್ರಮವಾಗಿ ಗೋಮಾಂಸವನ್ನು ಗೋವಾಕ್ಕೆ ಸಾಗಾಟ ಮಾಡಲಾಗುತ್ತಿದೆ ಎಂಬ ಅಧಿಕೃತ ಮಾಹಿತಿ ಗೋವಾ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಕುಳೆ ಪೊಲೀಸರು ಮೂಲೆಂ ಭಾಗದಲ್ಲಿ ಕಾರ್ಯಾಚರಣೆ ನಡೆಸಿದರು. ಜಿ ಎ 08 ಎಬಿ 44 79 ಗ್ರಾಮಾಂತರ ಮಹೇಂದ್ರ ಗಾಡಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಗೋವಾ ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಮೊಲೆಂ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಈ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು. ಈ ಪ್ರಕರಣದಲ್ಲಿ ಇಲ್ಯಾಸ್ ಎಂಬ ಧಾರವಾಡದ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಗೋಮಾಂಸವನ್ನು ಜಪ್ತಿ ಮಾಡಿದ್ದು ಇದಕ್ಕೆ ಬಳಸಿದ್ದ ವಾಹನವನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯಿಂದ ಗೋವಾದ ಮಡಗಾವ್ ಗೆ ಈ ಗೋಮಾಂಸ ವನ್ನು ತರಲಾಗುತ್ತಿತ್ತು. ಯಾವ ಹೋಟೆಲ್ಗೆ ಈ ಗೋಮಾಂಸ ತರಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಲಭ್ಯವಾಗಬೇಕಿದೆ.