ಸುದ್ದಿ ಕನ್ನಡ ವಾರ್ತೆ

ಪಣಜಿ: ನಿರೀಕ್ಷೆಯಂತೆಯೇ ಜಗತ್ತಿನಾದ್ಯಂತ ಅಬ್ಬರ ಎಬ್ಬಿಸಿರುವಂತೆ ಗೋವಾ ರಾಜ್ಯದಲ್ಲಿಯೂ ಕೂಡ ಕಾಂತಾರ ಚಾಪ್ಟರ್ 1 ಅಬ್ಬರಿಸುತ್ತಿದೆ.

ಅಕ್ಟೋಬರ್ 2 ದಸರಾ ಹಬ್ಬದಂದೆ ಗೋವಾದಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕಾಂತಾರ ಚಲನಚಿತ್ರ ಭಾರಿ ಪ್ರದರ್ಶನ ನಡೆಯುತ್ತಿದೆ.

ಚಲನಚಿತ್ರ ಬಿಡುಗಡೆಗೂ  ಮುನ್ನವೇ ಗೋವಾದಲ್ಲಿ ಐನಾಕ್ಸ್ ಚಿತ್ರಮಂದಿರ ಸೇರಿದಂತೆ ಚಲನಚಿತ್ರ ಪ್ರದರ್ಶನಗೊಳ್ಳುವ ಎಲ್ಲ ಚಿತ್ರಮಂದಿರಗಳಲ್ಲಿ ಈ ಚಲನಚಿತ್ರ ವೀಕ್ಷಣೆಗೆ ಟಿಕೆಟ್ ಮುಂಗಡ ಬುಕಿಂಗ್ ಆಗಿರುವುದು ವಿಶೇಷವಾಗಿದೆ.

ಗೋವಾದಲ್ಲಿ ಕನ್ನಡ ಮತ್ತು ಹಿಂದಿ ಈ ಎರಡು ಭಾಷೆಯ ಕಾಂತಾರ ಚಲನಚಿತ್ರ ಎರಡೆರಡು ದಿನ ಮುಂಚಿತವಾಗಿ ಟಿಕೆಟ್ ಬುಕಿಂಗ್ ಆಗುತ್ತಿರುವುದು ಕಂಡು ಬರುತ್ತಿದೆ. ಒಟ್ಟಾರೆ ಕಾಂತರ ಚಲನಚಿತ್ರವು ಹೊರರಾಜ್ಯ ಗೋವಾದಲ್ಲಿಯೂ ಕೂಡ ತನ್ನ ಅಬ್ಬರವನ್ನು ಮುಂದುವರಿಸಿದೆ.