ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಂದರ ಸಮುದ್ರ ತೀರಗಳು, ಬೋಟಿಂಗ್, ಆರಾಮದಾಯಕ ಹೋಟೆಲ್ ಗಳು, ವಿಶಿಷ್ಟ ಖಾದ್ಯಗಳ ಅನುಭವ, ಹೀಗೆ ಗೋವಾ ಪ್ರವಾಸವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಲು ಸಾಧ್ಯ.

ಹೌದು ಕೇವಲ 10000ಗಳಲ್ಲಿ ಗೋವಾ ಪ್ರವಾಸ ಮಾಡಲು ಸಾಧ್ಯ. ನಿಮಗೆ ವಿಶ್ವಾಸ ಬರುತ್ತಿಲ್ಲ ಅಲ್ಲವೇ. ಅತ್ಯಂತ ಕಡಿಮೆ ಖರ್ಚಿನಲ್ಲಿ ಗೋವಾ ಪ್ರವಾಸವನ್ನು ಹೀಗೆ ಮಾಡುವುದು ಎಂಬುದನ್ನು ನೋಡೋಣ.

ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಈ ಕಾಲದಲ್ಲಿ ಗೋವಾಕ್ಕೆ ಭೇಟಿ ನೀಡಿದ್ದಾರೆ ಉತ್ತಮ ಎಂದು ಹೇಳಿದಾಗುತ್ತದೆ. ಕಾರಣವೆಂದರೆ ಈ ಸಂದರ್ಭದಲ್ಲಿ ಪ್ರವಾಸಿಗರ ಗರ್ಜಿ ಕಡಿಮೆ ಇರುತ್ತದೆ. ಇದರಿಂದಾಗಿ ಪ್ರವಾಸೋದ್ಯಮ ದರ ಕೂಡ ಕಡಿಮೆ ಇರುವ ಸಾಧ್ಯತೆ ಇರುತ್ತದೆ.

ಈ ಸಂದರ್ಭದಲ್ಲಿ ದೆಹಲಿ ಅಥವಾ ಬೆಂಗಳೂರಿನಂತಹ ದೊಡ್ಡ ಶಹರಗಳಿಂದ ಗೋವಾಕ್ಕೆ 2000 ದಿಂದ 3000 ರೂಗಳ ವರೆಗೆ ವಿಮಾನ ಟಿಕೆಟ್ ಕೂಡ ಲಭಿಸಲು ಸಾಧ್ಯ.
ಪ್ರವಾಸೋದ್ಯಮ ಆಫ್ ಸೀಸನ್ ನಲ್ಲಿ ಹೋಟೆಲ್ ರೂಮ್ ಗಳು ಕೂಡ 800 ಗಳಿಂದ ರೂ.1500 ಗಳ ವರೆಗೆ ಲಭಿಸಲು ಸಾಧ್ಯ.

ಗೋವಾದಲ್ಲಿ ಪ್ರಮುಖ ಎಲ್ಲ ಸಮುದ್ರ ತೀರಗಳು ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ತೆರಳಲು ಇಲ್ಲಿನ ಸರ್ಕಾರಿ ಬಸ್ ಸೌಲಭ್ಯವಿದೆ. ಇದರಿಂದಾಗಿ ಕೇವಲ 20 ರಿಂದ 50 ಗಳಲ್ಲಿ ನಿಮಗೆ ಇಷ್ಟ ಇರುವ ಪ್ರವಾಸಿ ಸ್ಥಳಗಳನ್ನು ತಲುಪಲು ಸಾಧ್ಯ. ಬಾಡಿಗೆ ಬೈಕ್ ಗಳನ್ನು ಪಡೆದರೂ ಕೂಡ 300ರೂಗಳವರೆಗೆ ನಿಮ್ಮ ಪ್ರವಾಸ ಸಾಧ್ಯ.

ಹೀಗೆ ಗೋವಾದ ಪ್ರಮುಖ ಎಲ್ಲ ಪ್ರವಾಸಿ ತಾಣಗಳನ್ನು ಕೇವಲ ಹತ್ತು ಸಾವಿರ ರೂಗಳ ಒಳಗೆ ನಿಮ್ಮ ಬಜೆಟ್ ನಲ್ಲಿಯೇ ಸುಂದರ ಪ್ರವಾಸಿ ಅನುಭವವನ್ನು ಪಡೆಯಬಹುದಾಗಿದೆ.

ಗೋವಾದಲ್ಲಿರುವ ಸುಂದರ ಬೀಚ್ ಗಳು, ಜಲಪಾತಗಳು, ಬೋಟಿಂಗ್ ಗಳು, ಇಲ್ಲಿನ ಸುಂದರ ದೇವಾಲಯಗಳು, ನಿಮಗೆ ಮರೆಯಲಾಗದ ಸುಂದರ ಅನುಭವ ನೀಡುತ್ತದೆ.