ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 30 ರಂದು ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ಧಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಶ್ರೀ ಗೋಕರ್ಣ ಪರ್ತಗಾಳಿ ಮಠದ 550 ನೇಯ ವಾರ್ಷಿಕೋತ್ಸವ ಸಮಾರಂಭವು ಇದೇ ನವೆಂಬರ್ 30 ರಂದು ಕಾಣಕೋಣದಲ್ಲಿರುವ ಶ್ರೀಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹಾಗೂ ಪರ್ತಗಾಳಿ ಮಠದ ಅಧ್ಯಕ್ಷರಾದ ಉದ್ಯಮಿ ಶ್ರೀನಿವಾಸ್ ದೆಂಪೊ ರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದಾರೆ ಎಂಬ ಮಾಹಿತಿಯಿದೆ.
ಇದರಿಂದಾಗಿ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ ಎಂಬ ಸುದ್ಧಿ ಭಾರಿ ವೈರಲ್ ಆಗಿದೆ. ಮಠದ ಕಾರ್ಯಕ್ರಮಕ್ಕೆ ಪ್ರಧಾನಿಗಳು ಆಗಮಿಸಲಿದ್ದಾರೆ ಎಂಬ ಸುದ್ಧಿ ಸದ್ಯ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಇದುವರೆಗೂ ಪ್ರಧಾನಿ ಮೋದಿಯವರ ಕಛೇರಿಯಿಂದ ಅಧೀಕೃತ ಮಾಹಿತಿ ಹೊರಬಂದಿಲ್ಲ ಎನ್ನಲಾಗುತ್ತಿದೆ. ಆದರೆ ಗೋವಾ ಮುಖ್ಯಮಂತ್ರಿಗಳು ಹಾಗೂ ಶ್ರೀಮಠದ ಅಧ್ಯಕ್ಷರು ಪ್ರಧಾನಿಗಳನ್ನು ಆಮಂತ್ರಿಸಿರುವುದರಿಂದ ಪ್ರಧಾನಿಗಳ ಆಗಮನದ ನಿರೀಕ್ಷೆ ಎಲ್ಲರಲ್ಲಿಯೂ ಇದೆ.
ಕುಶಾವತಿ ನದಿಯ ದಡದಲ್ಲಿ ದಕ್ಷಿಣ ಗೋವಾದ ಕಾಣಕೋಣದಲ್ಲಿ ಪರ್ತಗಾಳಿ ಮಠವಿದೆ. ಗೌಡಸಾರಸ್ವತ ಸಮಾಜದ ಮುಖ್ಯ ಮಠ ಇದಾಗಿದೆ.