ಸುದ್ದಿ ಕನ್ನಡ ವಾರ್ತೆ
ಕಳೆದ ಕೆಲ ದಿನಗಳಿಂದ ಕರ್ನಾಟಕದ ಬೆಳಗಾವಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಗತ್ಪ್ರಸಿದ್ಧ ದೂದಸಾಗರ ಜಲಪಾತ ಮೈದುಂಬಿಕೊಂಡಿದೆ.
ಆದರೆ ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತ ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಜಲಪಾತದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುವುದರಿಂದ ಮಳೆಗಾಲದ ಸಂದರ್ಭದಲ್ಲಿ ಜಲಪಾತದ ಬಳಿ ತೆರಳಿದ್ದ ಪ್ರವಾಸಿಗರು ಜೀವ ಕಳೆದುಕೊಂಡ ಹಲವು ಉದಾಹರಣೆಗಳಿವೆ. ಈ ಘಟನೆ ಮರುಕಳಿಸದಂತೆ ಮುನ್ನೆಚ್ಚರಿ ಕಾರ್ಯಕ್ರಮವಾಗಿ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಮಳೆಗಾಲದ ಸಂದರ್ಭದಲ್ಲಿ ಗೋವಾ ಸರ್ಕಾರ ಸಂಪೂರ್ಣವಾಗಿ ನಿಷೇಧ ಹೇರಿದೆ.
ಇದೀಗ ಭಾರಿ ಮಳೆಗೆ ಜಲಪಾತ ಮೈದುಂಬಿ ಕೊಂಡಿದೆ. ಹಾಲಿನನೊರೆಯಂತೆ ನೀರು ಧಮ್ಮಿಕ್ಕುತ್ತಿದೆ.