Suddikannada news
Goa: Two olive ridley turtles laid 172 eggs at Agonda beach in Kanakona in the last week of December. But till now Galjeebagh sea turtles have not arrived.

Galjeebagh and Agonda beach in Kanakona, Goa are reserved beaches for turtles. On December 28, an Olive Ridley turtle arrived at this beach and laid 65 eggs. Another sea turtle arrived on December 29 and laid 165 eggs. Usually in the month of October sea turtles come to this beach to lay their eggs. In many cases, turtles lay eggs for months.

Agonda, Galazibagh in the state of Goa, these beaches are a breeding center for turtles. Tourists are restricted to these beaches. Sea turtles arrive here every year. It is special that turtles lay eggs in large numbers here.


ಸುದ್ಧಿಕನ್ನಡ ವಾರ್ತೆ
Goa: ಕಾಣಕೋಣದ ಆಗೊಂದಾ ಬೀಚ್ ನಲ್ಲಿ ಡಿಸೆಂಬರ್ ತಿಂಗಳ ಕೊನೇಯ ವಾರದಲ್ಲಿ ಎರಡು ಆಲಿವ್ ರಿಡಲೆ ಆಮೆಗಳು 172 ಮೊಟ್ಟೆ ಹಾಕಿವೆ. ಆದರೆ ಇದುವರೆಗೂ ಗಾಲಜೀಬಾಗ್ ಸಾಗರ ಆಮೆಗಳ ಆಗಮನವಾಗಿಲ್ಲ.

ಗೋವಾದ ಕಾಣಕೋಣದ ಗಾಲಜೀಬಾಗ್ ಮತ್ತು ಆಗೊಂದಾ ಬೀಚ್ ಆಮೆಗಳಿಗಾಗಿ ಕಾಯ್ದಿರಿಸಿದ ಬೀಚ್ ಆಗಿದೆ. ಡಿಸೆಂಬರ್ 28 ರಂದು ಆಲಿವ್ ರಿಡಲೆ ಆಮೆ ಈ ಬೀಚ್ ಗೆ ಆಗಮಿಸಿ 65 ಮೊಟ್ಟೆಯಿಟ್ಟಿದೆ. ಡಿಸೆಂಬರ್ 29 ಕ್ಕೆ ಮತ್ತೊಂದು ಸಾಗರ ಆಮೆ ಬಂದು 165 ಮೊಟ್ಟೆಯಿಟ್ಟಿದೆ. ಸಾಧಾರಣವಾಗಿ ಅಕ್ಟೋಬರ್ ತಿಂಗಳಿನಲ್ಲಿ ಸಾಗರ ಆಮೆಗಳು ಈ ಬೀಚ್ ಗೆ ಬಂದು ಮೊಟ್ಟೆಯಿಡುತ್ತವೆ. ಹಲವು ಸಂದರ್ಭದಲ್ಲಿ ತಿಂಗಳುಗಟ್ಟಲೆ ಆಮೆಗಳು ಮೊಟ್ಟೆಯಿಡುತ್ತಿರುತ್ತವೆ.

ಗೋವಾ ರಾಜ್ಯದಲ್ಲಿ ಆಗೊಂದಾ, ಗಾಲಜೀಬಾಗ್ ಈ ಬೀಚ್ ಗಳು ಆಮೆಗಳ ಸಂವರ್ಧನ ಕೇಂದ್ರವಾಗಿದೆ. ಈ ಬೀಚ್ ಗಳಿಗೆ ಪ್ರವಾಸಿಗರಿಗೆ ನಿರ್ಬಂಧವಿದೆ. ಇಲ್ಲಿ ಪ್ರತಿ ವರ್ಷ ಸಾಗರ ಆಮೆಗಳ ಆಗಮನವಾಗುತ್ತದೆ. ಇಲ್ಲಿ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯಿಡುವುದು ವಿಶೇಷವಾಗಿದೆ.