ಸುದ್ದಿ ಕನ್ನಡ ವಾರ್ತೆ

​ಗೋವಾ: ಬಾಳ್ಳಿ ಪ್ರದೇಶದ ಸಾವ್ರಿಕಾಡೆನ್-ಸುಬ್ಡೋಲೆಂ ಜಂಕ್ಷನ್ ಸಮೀಪ ರಸ್ತೆ ಬದಿಯ ದೊಡ್ಡ ಮರ ಏಕಾಏಕಿ ಉರುಳಿ ವಾಹನದ ಮೇಲೆ ಬಿದ್ದ ಘಟನೆ ನಡೆದಿದೆ.

ಘಟನೆಯಿಂದ ವಾಹನಕ್ಕೆ ಹಾನಿಯಾಗಿದ್ದು, ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರು ಹಾಗೂ ಸಂಬಂಧಿತ ಸಿಬ್ಬಂದಿ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಪುನಃ ಸುಗಮಗೊಳಿಸಿದರು. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.