ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಗ್ರಾಮೀಣ ಭಾಗದಲ್ಲಿ ಚಿರತೆಗಳ ಓಡಾಟ ಹೆಚ್ಚುತ್ತಿದ್ದು, ರಾತ್ರಿಯ ವೇಳೆ ಜನವಸತಿ ಪ್ರದೇಶಗಳಿಗೆ ಬಂದು ಸಾಕುಪ್ರಾಣಿಗಳನ್ನು ಚಿರತೆ ಹೊತ್ತು ಪರಾರಿಯಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನತೆ ಕಂಗಾಲಾಗಿದ್ದಾರೆ. ಗೋವಾದ ಮಾಪ್ಸಾ ಥಿವಿಮ್ ನಲ್ಲಿ ಇಂತಹ ಘಟನೆ ನಡೆದಿದ್ದು, ನಾಯಿಯ ಮೇಲೆ ಚಿರತೆ ಧಾಳಿ ಮಾಡಿರುವ ದೃಶ್ಯ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.
ಗೋವಾದ ಥಿವಿಮ್ ಪಿಕೆನವಾಡಾದಲ್ಲಿ ಚಿರತೆಯೊಂದು ಜನವಸತಿ ಪ್ರದೇಶಕ್ಕೆ ಬಂದು ನಾಯಿಯನ್ನು ಹೊತ್ತು ಪರಾರಿಯಾಗಿದೆ. ಈ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಬಲೆ ಬೀಸಿದೆ. ಅಕ್ಟೋಬರ್ 2 ರಂದು ಮಧ್ಯಾನ್ಹ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಹಾಡು ಹಗಲೇ ಚಿರತೆ ಊರಿಗೆ ಬರುತ್ತಿರುವುದನ್ನು ಕಂಡು ಜನತೆ ಕಂಗಾಲಾಗಿದ್ದಾರೆ.
ಮನೆಯ ಮುಂದೆ ಇದ್ದ ನಾಯಿ ಕಾಣೆಯಾಗಿದ್ದರಿಂದ ಮನೆಯವರು CCTV ಕ್ಯಾಮರಾ ಪರಿಶೀಲಿಸಿದಾಗ ಚಿರತೆ ನಾಯಿಯ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ಘಟನೆಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, CCTV ಕ್ಯಾಮರಾ ವೀಕ್ಷಿಸಿದ್ದಾರೆ. ಚಿರತೆ ಸೆರೆಗೆ ಬಲೆ ಬೀಸಿದ್ದಾರೆ.