ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ವೆರ್ಣಾದಲ್ಲಿ ಭಾನುವಾರ ರಾತ್ರಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನಕ್ಕೆ ಬೆಂಕಿಹೊತ್ತಿಕೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರ ಕೆಲ್ವಿನ್ ಇಶಾಂತ ಪರೇರಾ (32) ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ವೆರ್ಣಾ ಪೋಲಿಸರು ಪಂಚನಾಮೆ ನಡೆಸಿದ್ದಾರೆ. ಬಸ್ ಚಾಲಕ ಜಾಕಿರ್ ಹುಸೇನ್ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತಂತೆ ಲಭ್ಯವಾದ ಮಾಹಿತಿಯ ಅನುಸಾರ- ಕೆಲ್ವಿನ್ ಈತ ಬೆಳಗಾವಿಯ ಸಂಗರಗಲ್ಲಿಯಲ್ಲಿ ವಾಸಿಸುತ್ತಿದ್ದ. ಈತ ಭಾನುವಾರ ರಾತ್ರಿ ದ್ವಿಚಕ್ರ ವಾಹನದ ಮೂಲಕ ಪಣಜಿಯಿಂದ ಮಡಗಾಂವಗೆ ತೆರಳುತ್ತಿದ್ದ. ಬಸ್ ಮಡಗಾಂವನಿಂದ ವಾಸ್ಕೊಕ್ಕೆ ತೆರಳುತ್ತಿತ್ತು. ಬಸ್ ವೆರ್ಣಾದ ಫಾದರ್ ಆಗ್ನೇಲ ಆಶ್ರಮದ ಎದುರು ತಲುಪುತ್ತಿದ್ದಂತೆಯೇ ಎದುರಿನಿಂದ ಬರುತ್ತಿದ್ದ ಕೆಲ್ವಿನ್ ನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಗೆ ಬೆಂಕಿಹೊತ್ತಿಕೊಂಡಿದೆ. ರಸ್ತೆಯಲ್ಲಿ ಬಿದ್ದಿದ್ದ ಕೆಲ್ವಿನ್ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ.
ಗಂಭೀರಾಗಿ ಗಾಯಗೊಂಡಿದ್ದ ಈತನನ್ನು ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಆತ ಸಾವನ್ನಪ್ಪಿದ್ದ ಎನ್ನಲಾಗಿದೆ.
