ಸುದ್ಧಿಕನ್ನಡ ವಾರ್ತೆ
ಪಣಜಿ: ಹೈಕೋರ್ಟ ಆದೇಶದ ಹೊರತಾಗಿಯೂ ಪ್ರಸ್ತಾವಿತ ಯುನಿಟಿ ಮಾಲ್ ಯೋಜನೆಯ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಚಿಂಬಲ್ ಗ್ರಾಮಸ್ಥರು ಆರೋಪಿಸಿದ್ದಾರೆ. ಇದು ಸ್ಥಳೀಯರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಕಾಮಗಾರಿಯು ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಪ್ರತಿರೋಧದ ಸಂಕೇತವಾಗಿ ಚಿಂಬಲ್ ನಿವಾಸಿಗಳು ಡಿಸೆಂಬರ್ 28 ರಂದು ಚಿಂಬಲ್ ನಲ್ಲಿರುವ ಯೂನಿಟಿ ಮಾಲ್ ಯೋಜನಾ ಸ್ಥಳದ ಬಳಿ ಉಪವಾಸ ಸತ್ಯಾಗೃಹ ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿಕೆ ನೀಡಿದ್ದಾರೆ. ಜನವರಿ 4 ರಂದು ಗ್ರಾಮಸ್ಥರು ಬೃಹತ್ ರ್ಯಾಲಿಯನ್ನು ಘೋಷಿಸಿದ್ದಾರೆ.
ಡಿಸೆಂಬರ್ 26 ರಂದು ಚಿಂಬಲ್ ಪಂಚಾಯತಿ ಕಾರ್ಯಾಲಯದ ಎದುರು ಪ್ರತಿಭಟನಾಕಾರರು ಘೇರಾವ್ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಡಿಸೆಂಬರ್ 28 ರಿಂದ ಅನಿರ್ದಿಷ್ಠಾವಧಿ ಉಪವಾಸ ನಡೆಸುವುದಾಗಿ ಘೋಷಿಸಿದ್ದಾರೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರವು ನಡೆಸುತ್ತಿರುವ ಕ್ರಮದಿಂದಾಗಿ ಊರಿನ ಪರಿಸರ, ನೀರಿನ ಕೊರತೆ, ಆದಿವಾಸಿ ಪರಂಪರೆಗೆ ಧಕ್ಕೆಯುಂಟಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.