ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ): ಗೋವಾ ಕನ್ನಡ ಸಂಘ (ರಿ) ಮಡಗಾಂವ ಇವರ ಆಶ್ರಯದಲ್ಲಿ ನವೆಂಬರ್ 12 ರಂದು ಬುಧವಾರ ಸಂಜೆ 6 ಗಂಟೆಗೆ ಮಡಗಾಂವನ ರವೀಂದ್ರ ಭವನದ ಕಾನ್ಪರೆನ್ಸ ಹಾಲ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿವಿಎಂ ಪೊಂಡಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪ್ರಭುಲಿಂಗ್ ಗುರಪ್ಪಾ ದಂಡಿನ ಉಪಸ್ಥಿತರಿರುವರು. ಗೌರವ ಅತಿಥಿಗಳಾಗಿ ಎನ್ ಐಟಿ ಗೋವಾ ಸಹ ಪ್ರಾಧ್ಯಾಪಕರಾದ ಡಾ. ವೀಣಾ ತೆಂಕನಿಡಿಯೂರ್ ರವರು ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮದ ನಂತರ ಕನ್ನಡ ಸಂಘದ ಬಳಗದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಗೋವಾದಲ್ಲಿರುವ ಎಲ್ಲ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹಾಗು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಗೋವಾ ಕನ್ನಡ ಸಂಘ ಮಡಗಾಂವ ಅಧ್ಯಕ್ಷ ಮೋಹನ್ ಕಾಂಬಳೆ, ಕಾರ್ಯದರ್ಶಿ ಕೃಷ್ಣಾ ಬಗಲಿ, ಖಜಾಂಚಿ ದಿಗಂಬರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.