ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಸರ್ಕಾರವು ಕರ್ನಾಟಕದಿಂದ ಲಕ್ಷಾಂತರ ತೆಂಗಿನ ಕಾಯಿ ಖರೀದಿಸಿ ಗೋವಾ ರಾಜ್ಯದಲ್ಲಿ ಸಬ್ಸಿಡಿ ದರದಲ್ಲಿ ತೆಂಗಿನ ಕಾಯಿ ವಿತರಣೆ ಮಾಡಿದೆ. ಆದರೂ ಕೂಡ ಗೋವಾ ರಾಜ್ಯದಲ್ಲಿ ತೆಂಗಿನ ಕಾಯಿ ದರ ಕಡಿಮೆಯಾಗಿಲ್ಲ.

ಗೋವಾ ರಾಜ್ಯದಲ್ಲಿ ಸದ್ಯ ದೊಡ್ಡ ಗಾತ್ರದ ತೆಂಗಿನ ಕಾಯಿಯನ್ನು 50 ರಿಂದ 60 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧ್ಯಮ ಗಾತ್ರದ ತೆಂಗಿನ ಕಾಯಿಯನ್ನು 50 ರಿಂದ 60 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಗೋವಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೆಂಗಿನ ಕಾಯಿ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಚೌತಿ ಹಬ್ಬದ ಸಂದರ್ಭದಲ್ಲಿ 1 ಲಕ್ಷ ತೆಂಗಿನ ಕಾಯಿಯನ್ನು ಕರ್ನಾಟಕದಿಂದ ಗೋವಾಕ್ಕೆ ತಂದು ಸಬ್ಸಿಡಿ ದರದಲ್ಲಿ ಅಂದರೆ 45 ರೂ ದರದಲ್ಲಿ ತೆಂಗಿನ ಕಾಯಿ ಲಭಿಸುವಂತೆ ಮಾಡಲಾಗಿತ್ತು. ಆದರೆ ಗೋವಾದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನತೆಗೆ ತೆಂಗಿನ ಕಾಯಿ ಸಬ್ಸಿಡಿ ದರದಲ್ಲಿ ಲಭಿಸುವಂತೆ ಮಾಡಿದರೂ ಕೂಡ ತೆಂಗಿನ ಕಾಯಿ ದರದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಯಾವುದೇ ಇಳಿಕೆ ಕಂಡುಬಂದಿಲ್ಲ.

ಇಂದಿಗೂ ಕೂಡ ಜನತೆ ಮಾರುಕಟ್ಟೆಯಲ್ಲಿ 50 ರಿಂದ 60 ರೂ ನೀಡಿ ತೆಂಗಿನ ಕಾಯಿ ಖರೀದಿಸುವಂತಾಗಿದೆ. ಗೋವಾದಲ್ಲಿ ತೆಂಗಿನ ಕಾಯಿ ಆವಕ ಹೆಚ್ಚಾದ ನಂತರವೂ ಕೂಡ ಗೋವಾದಲ್ಲಿ ತೆಂಗಿನ ಕಾಯಿ ದರ ಮಾತ್ರ ಹಾಗೆಯೇ ಉಳಿದುಕೊಂಡಿದೆ.