ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಗ್ರಾಮೀಣ ಭಾಗದಲ್ಲಿ ಓಂಕಾರ ಎಂಬ ಆನೆಯ ಧಾಳಿ ಮುಂದುವರೆದಿದ್ದು ಕೃಇ ಕ್ಷೇತ್ರಕ್ಕೆ ಹೆಚ್ಚಿನ ಹಾನಿಯಾಗುವಂತಾಗಿದೆ. ಗೋವಾದ ಪೆಡ್ನೆ ಬಳಿಯ ತಂಬೋಸ್ ಗ್ರಾಮದಲ್ಲಿ ಏಳು ದಿನಗಳ ಕಾಲ ದೊಡ್ಡ ಪ್ರಮಾಣದಲ್ಲಿ ಕೃಷಿ ಕ್ಷೇತ್ರ ನಾಶಪಡಿಸಿದ ನಂತರ ಇದೀಗ ಓಂಕಾರ್ ಆನೆಯು ಉಗ್ವೆ ಗ್ರಾಮ ಪ್ರವೇಶಿಸಿದೆ. ಈ ಭಾಗದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಉಗ್ವೆ ಗ್ರಾಮದಲ್ಲಿ ಓಂಕಾರ ಆನೆಯು ಕಳೆದ ಎರಡು ದಿನಗಳಿಂದ ಭತ್ತದ ಗದ್ಧೆ, ಬಾಳೆ, ಅಡಿಕೆ ತೋಟ, ವೀಳ್ಯದೆಲೆ ಧ್ವಂಸ ಮಾಡತೊದಗಿದ್ದು ರೈತರು ಕಂಗಾಲಾಗಿದ್ದಾರೆ. ಈ ಆನೆಯನ್ನು ಹಿಡಿಯಲು ಇದುವರೆಗೂ ಯಾವುದೇ ತಂಡವೂ ಬಂದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಆನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಕೂಡಲೇ ಕ್ರಮ ಕೈಗೊಳ್ಳಬೇಕು. ಸದ್ಯ ನಾವು ಭುಯದಲ್ಲೇ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಜೀವನ ಕೃಷಿಯ ಮೇಲೆ ಅವಲಂಭಿತವಾಗಿದೆ. ಓಂಕಾರ ಆನೆಯು ಕೃಷಿ ಕ್ಷೇತ್ರಕ್ಕೆ ಹಾನಿಯುಂಟು ಮಾಡುತ್ತಲೇ ಸಾಗಿದರೆ ನಾವು ಹೇಗೆ ಬದುಕುತ್ತೇವೆ. ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಆದರೆ ಯಾವುದೇ ನಿರ್ದಿಷ್ಠ ಜಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೃಷಿಕರಾದ ಉದಯ ಮಹಾಲೆ ಬೇಸರ ವ್ಯಕ್ತಪಡಿಸಿದರು.
ಕಳೆದ ಹತ್ತು ದಿನಗಳಲ್ಲಿ ಓಂಕಾರ ಆನೆಯು ಗೋವಾದ ಮೋಪಾ, ತೊರ್ಸೆ, ತಾಂಬೊಸೆ, ಮಾರ್ಗವಾಗಿ ಕೃಷಿ ಕ್ಷೇತ್ರ ಧ್ವಂಸಗೊಳಿಸುತ್ತಾ ಉಗ್ವೆ ಗ್ರಾಮಕ್ಕೆ ಬಂದು ತಲುಪಿದೆ. ರಾಜ್ಯ ಕೃಷಿ ಇಲಾಖೆಯು ಹಾನಿಯ ಸಮೀಕ್ಷೆ ನಡೆಸಿದ್ದರೂ ಕೂಡ ಎಷ್ಟು ಪರಿಹಾರ ನೀಡಲಾಗುತ್ತದೆ ಎಂಬುದು ಮಾತ್ರ ಇದುವರೆಗೂ ಸ್ಪಷ್ಠವಾಗಿಲ್ಲ.
ಸದ್ಯ ಗೋವಾದ ಉಗ್ವೆ ಪ್ರದೇಶದಲ್ಲಿ ಓಂಕಾರ ಆನೆಯು ದಿನವಿಡೀ ಹೊಲಗದ್ಧೆ ತೋಟ ಸುತ್ತಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಬಾಯಾರಿದಾಗ ತೆರೆಖೋಲ್ ನದಿಯಲ್ಲಿ ನೀರು ಕುಡಿದು ಮತ್ತೆ ಅಲ್ಲಿನ ಹೊಲ,ತೋಟಕ್ಕೆ ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಹೊಲ,ತೋಟ ಧ್ವಂಸವಾಗಿದೆ. ಅರಣ್ಯ ಇಲಾಖೆ ಸಿಬ್ಬಂಧಿಗಳ ಬಳಿ ಆನೆಯನ್ನು ಕಾಡಿಗೆ ಓಡಿಸಲು ಯಾವುದೇ ಉಪಕರಣ ಅಥವಾ ಭಧ್ರತಾ ವ್ಯವಸ್ಥೆಗಳಿಲ್ಲ ಎನ್ನಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ತಜ್ಞರ ಕೊರತೆಯಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.