ಸುದ್ಧಿಕನ್ನಡ ವಾರ್ತೆ
ಗೋವಾದ ವಾಸ್ಕೊ ಸಾಂಕೊಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಅನುಷಾ ಗೋವಿಂದ ಲಮಾಣಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇವರ ವಿರುದ್ಧ ಪ್ರತಿಸ್ಫರ್ಧಿಯಾಗಿ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಅನುಷಾ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ ಚುನಾಯಿತ ಪಂಚ ಸದಸ್ಯರು ತಮ್ಮ ಸಂಪೂರ್ಣ ಸಹಕಾರದ ಪ್ರತಿಜ್ಞೆ ಮಾಡಿದ್ದು, ಅನುಷಾ ಲಮಾಣಿ ರವರ ನಾಯಕತ್ವದಲ್ಲಿ ಒಕ್ಕಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅನುಷಾ ಲಮಾಣಿ ಪ್ರತಿಕ್ರಿಯೆ ನೀಡಿ- ಸಮಗ್ರ ಪ್ರಗತಿ ಮತ್ತು ಪಾರದರ್ಶಕ ಆಡಳಿತ ಗುರಿಯಾಗಿಟ್ಟುಕೊಂಡು ಪಂಚಾಯತ್ವನ ಅಭಿವೃದ್ಧಿಗೆ ಶೃಮಿಸುವುದಾಗಿ ನೂತನವಾಗಿ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುಷಾ ಲಮಾಣಿ ಭರವಸೆ ನೀಡಿದರು.