ಸುದ್ಧಿಕನ್ನಡ ವಾರ್ತೆ
Goa: ಗಾಂಧಿ ಜಯಂತಿಯ ಈ ದಿನ ಬೆಳಿಗ್ಗೆ 7 ರಿಂದ 8 ವರೆಗೆ ಕರಾಂಜಲೆಮ್ ಬೀಚ್ ನಲ್ಲಿ ಧನಂಜಯ ಗುಡಿ ನೇತೃತ್ವದಲ್ಲಿ ( ರೋಟ್ರ್ಯಾಕ್ಟ ಕ್ಲಬ್ ಪಣಜಿ i)ಯವರು ಆಯೋಜಿಸಿದ್ದ ಸ್ವಚ್ಚತಾಕಾರ್ಯ ದಲ್ಲಿ ಗೋವಾ ಕನ್ನಡ ಸಮಾಜ ಪಣಜಿಯ ಅಧ್ಯಕ್ಷ ಅರುಣ ಕುಮಾರ್, ಸದಸ್ಯರಾದ ಸಿ ಜಿ ಕಣ್ಣೂರ್ ಮತ್ತು ಪಣಜಿಯ ಅಗ್ನಿಶಾಮಕಧಳ ಸಿಬ್ಬಂದಿಯವರು ಹಾಗೂ ದನಂಜಯ ಗುಡಿ ಯವರು ಪಾಲ್ಗೋಂಡಿದ್ದರು.

ನಂತರ 8,30ಕ್ಕೆ ಗೋವಾ ಕನ್ನಡ ಸಮಾಜದ ಪಣಜಿ ಚೇರಿಯಲ್ಲಿ ಸಾಂಕೇತಿಕವಾಗಿ ಗಾಂಧಿಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅದ್ಯಕ್ಷ–ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಸದಸ್ಯರಾದ ಸಿ.ಜಿ ಕಣ್ಣೂರು, ಮಂಜು ದೊಡ್ಡಮನಿ ಹಾಗು ಧನಂಜಯ ಗುಡಿ ಉಪಸ್ಥಿತರಿದ್ದರು..