ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಶುಕ್ರವಾರ ಸಂಜೆ ಪಣಜಿಯ ಕಛೇರಿಯಲ್ಲಿ ಶ್ರಾವಣಾರಾಧನೆ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಲಾಯಿತು. ಗೋವಾ ಕನ್ನಡ ಸಮಾಜದ ಸದಸ್ಯರಾದ ಸುನೀಲ್ ಕುಮಟಳ್ಳಿ ದಂಪತಿಗಳ ಯಜಮಾನತ್ವದಲ್ಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಪ್ರಶಾಂತ್ ಜೈನ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸದಸ್ಯರಾದ ನೀರಜ್ ದಿವಾಕರ್, ಪ್ರಕಾಶ ಭಟ್, ಮಂಜುನಾಥ ದೊಡ್ಮನಿ, ಸೇರಿದಂತೆ ಕನ್ನಡ ಸಮಾಜದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸಮಾಜದ ಹಿರಿಯರು, ಕನ್ನಡಿಗರು ಪಾಲ್ಗೊಂಡಿದ್ದರು.
ಪಣಜಿ ಶ್ರೀಧರ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.