ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮಂತ್ರಿಮಂಡಲ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ವಯಕ್ತಿಕ ಕಾರಣ ನೀಡಿ ಅಲೆಕ್ಸ ಸಿಕ್ಕೇರಾ ರವರು ಇಂದು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಮೇಶ ತವಡಕರ್ ಹಾಗೂ ದಿಗಂಬರ್ ಕಾಮತ್ ರವರಿಗೆ ಮಂತ್ರಿ ಸ್ಥಾನ ಪಕ್ಕಾ ಆಗಿದ್ದು ಗುರುವಾರ ಮಧ್ಯಾನ್ಹ ಪ್ರಮಾಣವಚನ ಸ್ವೀಕಾರ ನಡೆಯಲಿದೆ.

ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಬುಧವಾರ ರಾತ್ರಿ ದೆಹಲಿಯಿಂದ ಗೋವಾಕ್ಕೆ ಆಗಮಿಸಲಿದ್ದಾರೆ. ಕಳೆದ ಸುಮಾರು ಒಂದು ವರ್ಷದಿಂದ ಹತ್ತಾರು ಬಾರಿ ಮಂತ್ರಿಮಂಡಲ ವಿಸ್ತರಣೆ ಚರ್ಚೆಗೆ ಬಂದು ಮುಂದೆ ಹೋಗಿತ್ತು. ಕೊನೆಗೂ ಇದೀಗ ಮುಹೂರ್ತ ಫಿಕ್ಸ ಆಗಿದೆ. ವಿಧಾನಸಭೆಯ ಸಭಾಪತಿ ರಮೇಶ ತವಡಕರ್ ಹಾಗೂ ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ದಿಗಂಬರ್ ಕಾಮತ್ ರವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ. ಮುರಗಾಂವ ಶಾಸಕ ಸಂಕಲ್ಪ ಅಮೋಣಕರ್ ಹಾಗೂ ಕಲಂಗುಟ್ ಶಾಸಕ ಮೈಕಲ್ ಲೋಬೊ ರವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಲಭಿಸಲಿದೆ ಎಂದೇ ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಶಾಸಕ ಮೈಕಲ್ ಲೋಬೊ ರವರು ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರನ್ನು ಭೇಟಿ ಮಾಡಿದ್ದರು.