ಸುದ್ಧಿಕನ್ನಡ ವಾರ್ತೆ
ಪಣಜಿ: ಜಗನ್ಮಾತೆ ಶ್ರೀ ವನದುರ್ಗೆಯು ಗೋವಾಕ್ಕೆ ಬಂದು ಕನ್ನಡಿಗರನ್ನು ಆಶೀರ್ವದಿಸಿದ್ದಾಳೆ. ಹೌದು ಗೋವಾದಲ್ಲಿ ಜಗನ್ಮಾತೆ ಶ್ರೀ ವನದುರ್ಗೆ ಯಕ್ಷಗಾನದ ಮೂಲಕ ದೇವಿಯು ಆಶೀರ್ವಾದ ನೀಡಿದ್ದಾಳೆ.

ಗೋವಾದ ಪರ್ವರಿಯ ಅಜಾದ್ ಭವನದಲ್ಲಿ ಭಾನುವಾರ ಸಂಜೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದರ್ತಿ ಯವರಿಂದ ಜಗನ್ಮಾತೆ ಶ್ರೀ ವನದುರ್ಗೆ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಯಕ್ಷಗಾನ ವೀಕ್ಷಣೆಗೆ ಗೋವಾ ಮೂಲೆ ಮೂಲೆಯಲ್ಲಿರುವ ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.


ಮೊದಲು ಇದೇ ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ರವರ ನೇತ್ರತ್ವದಲ್ಲಿ ಯಕ್ಷಗಾನ ತರಬೇತಿ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ಪ್ರಾಚಾರ್ಯರಾದ ಮಹಾಬಲ ಭಟ್ ರವರು ನೆರವೇರಿಸಿದರು. ಪುಷ್ಕಳ ಜಿ ಭಟ್, ಚಿನ್ಮಯಿ ಜಿ ಭಟ್, ವೆದಾನ್ಷ ಶೆಟ್ಟಿ, ಆಯನ್ಷ ಶೆಟ್ಟಿ,ನಿಕಿತಾ ನಾಯ್ಕ್ , ದಿವ್ಯ ಮಾಣೆಕ್ಯಲಾ, ಗಾರ್ಗಿ ಸರ್ದೇಸಾಯಿ , ನಿಕಿತಾ ದೇಸಾಯಿ ಈ ವಿದ್ಯಾರ್ಥೀಗಳಿಗೆ ಗುರುಗಳಾದ ಅರ್ಜುನ್ ಬೆಳ್ಳಾರೆ ಯವರು ತರಬೇತಿ ನೀಡಲು ಉಪಸ್ಥಿತರಿದ್ದರು.

ಇದೇ ವೇದಿಕೆಯಲ್ಲಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು, ಎಸ್ ಎಂ ಶೆಟ್ಟಿ , ಪ್ರಶಾಂತ್ ಜೈನ್, ಅರುಣ ಕುಮಾರ್, ರಾಘವೇಂದ್ರ ಉಡುಪ, ಅಶೋಕ ಶೆಟ್ಟಿ, ರಮೇಶ ಶೆಟ್ಟಿ
ಉಮಾ ರಾವ್, ನಾಗೇಶ್ ಪುಜಾರಿ, ಬಾಗವತರಾದ ಸದಾಶಿವ ಅಮೀನ್ ಉಪಸ್ಥಿತರಿದ್ದರು