ಸುದ್ಧಿಕನ್ನಡ ವಾರ್ತೆ
Goa: ಕೋವಿಡ್-19 ಮಹಾಮಾರಿಯ ನಂತರ ಪ್ರಸಕ್ತ ವರ್ಷ ಗೋವಾ ಪ್ರವಾಸಿ ಹಂಗಾಮಿನಲ್ಲಿ ಗೋವಾಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ವಾತಾವರಣ ನಿರ್ಮಾಣವಾಗಿದೆ. ಉಜಬೇಕಿಸ್ತಾನ, ಪೋಲಂಡ, ರಷ್ಯಾ, ಯೂಕೆ, ಈ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ 5 ವರ್ಷಗಳ ತುಲನೆಯಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂಬ ವಿಶ್ವಾಸ ಗೋವಾ ಪ್ರವಾಸೋದ್ಯಮ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕುರಿತಂತೆ ಗೋವಾ ಶಾಕ್ ಮಾಲೀಕ ಕಲ್ಯಾಣ ಸೊಸೈಟಿಯ ಅಧ್ಯಕ್ಷ ಪ್ರತಿಕ್ರಿಯೆ ನೀಡಿ- ಕೋವಿಡ್-19 ಮಹಾಮಾರಿಯ ನಂತರ ಶಾಕ್ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸರ್ಕಾರದಿಂದ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಸಹಾಯ ನೀಡಲಾಗಿತ್ತು. ಆದರೆ ಕಳೆದ ವರ್ಷ ಶಾಕ್ ಪರವಾನಗಿ ನೀಡಲು ವಿಳಂಭವಾದ ಕಾರಣ ಉದ್ಯೋಗವು ಅಷ್ಟೊಂದು ಉತ್ತಮವಾಗಿ ನಡೆದಿರಲಿಲ್ಲ. ಪ್ರಸಕ್ತ ವರ್ಷ ಶಾಕ್ ಪರವಾನಗಿಯನ್ನು ಸಮಯಕ್ಕೆ ಸರಿಯಾಗಿ ನೀಡಿದರೆ ಉದ್ಯೋಗ ಉತ್ತಮವಾಗಿ ನಡೆಯುವ ಸಾಧ್ಯತೆಯಿದೆ. ಪ್ರಸಕ್ತ ವರ್ಷ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಆದರೆ ಮೋಪಾ ವಿಮಾನ ನಿಲ್ದಾಣ ಆಣಭಗೊಂಡ ನಂತರ ದಕ್ಷಿಣ ಗೋವಾದಲ್ಲಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋವಾ ರಾಜ್ಯವು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವಿದೇಶಿ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಭೇಟಿ ನೀಡುತ್ತಾರೆ. ಕೋವಿಡ್ ನಂತರದಲ್ಲಿ ಗೋವಾ ಪ್ರವಾಸೋದ್ಯಮವು ಹಂತ ಹಂತವಾಗಿ ಚೇತರಿಸಿಕೊಂಡಿದೆ. ಪ್ರಸಕ್ತ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡಲಿರುವ ಸಾಧ್ಯತೆಯಿದೆ. ಪ್ರಸಕ್ತ ಅಕ್ಟೋಬರ್ ನಿಂದ ಗೋವಾ ಪ್ರವಾಸಿ ಸೀಜನ್ ಆರಂಭಗೊಂಡಿದೆ. ಇಷ್ಟೇ ಅಲ್ಲದೆಯೇ ಪ್ರಸಕ್ತ ವರ್ಷ ಓಲ್ಡ ಗೋವಾ ಸಂತ ಫ್ರಾನ್ಸಿಸ್ ಜೇವಿಯರ್ ಶವದರ್ಶನ ಸಮಾರಂಭ ಕೂಡ ಜರುಗಲಿದೆ. ಈ ಸಮಾರಂಭವು 45 ದಿನಗಳ ಕಾಲ ಜರುಗಲಿದ್ದು ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ದೇಶ ವಿದೇಶ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.