ಸುದ್ಧಿಕನ್ನಡ ವಾರ್ತೆ
ಪಣಜಿ: ಗೋಕುಲಾಷ್ಠಮಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ದೇಶಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಗೋವಾದ ಮಡಗಾಂವನಲ್ಲಿ ಮಾತ್ರ ಪ್ರಸಕ್ತ ವರ್ಷದ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಕಳೆದ ವರ್ಷ ಬಾಕ್ಸ ಆಫಿಸ್ ಹಿಟ್ ಆಗಿದ್ದ “ಪುಷ್ಪ” ಚಲನಚಿತ್ರದ ಜಾದು ಇನ್ನೂ ನಡೆಯುತ್ತಿದೆ ಎಂಬುದು ಮಡಗಾಂವನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಚಿತವಾಗಿದೆ. ಮಡಗಾಂವನಲ್ಲಿ ನಡೆದ ಮೊಸರು ಗಡಿಗೆ ಕಾರ್ಯಕ್ರಮದಲ್ಲಿ “ಪುಷ್ಪ” ವೇಷಧಾರಿ ಎಲ್ಲರ ಗಮನ ಸೆಳೆದಿದ್ದಂತೂ ನಿಜ.

ಶನಿವಾರ ಮಡಗಾಂವನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆಯೇ ಒಬ್ಬ ವ್ಯಕ್ತಿ “ಪುಷ್ಪ” ವೇಷದಲ್ಲಿ ವೇದಿಕೆಗೆ ಆಗಮಿಸಿದ. ಈತ ನಿಜವಾದ ಅಲ್ಲು ಅರ್ಜುನ್ ನಂತೆಯೇ ಕಾಣುತ್ತಿದ್ದುದರಿಂದ ಪ್ರೇಕ್ಷಕರು ಕೂಡ ಅಚ್ಚರಿಗೊಂಡರು. ಹೆಚ್ಚಿನ ಜನರು ಈತ ನಿಜವಾದ ಅಲ್ಲು ಅರ್ಜುನ್ ಅಂದುಕೊಂಡರು. ಜೀಪ್ ಮೇಲೆ ನಿಂತು ಈ ವ್ಯಕ್ತಿ ಪುಷ್ಪ ಸ್ಟೈಲ್ ನಲ್ಲಿ ವೇದಿಕೆ ಪ್ರವೇಶಿಸಿರುವುದು ಪ್ರೇಕ್ಷಕರ ಗಮನ ಸೆಳೆಯಿತು.

ಪುಷ್ಟ ಸ್ಟೈಲ್ ನಲ್ಲಿ ಮೊಸರು ಗಡಿಗೆ ಕಾರ್ಯಕ್ರಮಕ್ಕೆ ಈತ ಪ್ರವೇಶಿಸಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಕೆಲವರಂತೂ ಗೋಕುಲಾಷ್ಠಮಿಯಲ್ಲಿ ಪುಷ್ಪ ಬಂದಿರುವ ಕುರಿತಂತೆ ಠೀಕೆ ಕೂಡ ಮಾಡುತ್ತಿದ್ದಾರೆ. ಗೋಕುಲಾಷ್ಠಮಿ ಉತ್ಸಾಹಕ್ಕೆ ಆಧುನಿಕತೆ ಬಂದು ತಗುಲಿತೆ..? ಎಂಬಂತಾಗಿದೆ.