ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಪ್ರವಾಸೋದ್ಯಮ ಬಹುಮುಖ್ಯ ಆಕರ್ಷಣೆಯಾಗಿದೆ. ಅದರಲ್ಲೂ ಮಹದಾಯಿ ರಿವರ್ ರ್ಯಾಪ್ಟಿಂಗ್ ದೇಶ ವಿದೇಶಿಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆದರೆ ಮಹದಾಯಿ ವಾಟರ್ ರ್ಯಾಪ್ಟಿಂಗ್ (Rapting)  ಬಂದ್ ಆಗುವ ಸಾಧ್ಯತೆಯಿದೆಯೇ…? ಹೌದು ಇಂತಹದ್ದೊಂದು ಸುದ್ಧಿ ಹೊರಬಿದ್ದಿದೆ.

ಗೋವಾದ ಸತ್ತರಿ ತಾಲೂಕಿನ ಮಹದಾಯಿ ನದಿಯಲ್ಲಿ ಕಳೆದ 9 ವರ್ಷಗಳಿಂದ ಮಹದಾಯಿ ರಿವರ್ ರ್ಯಾಪ್ಟಿಂಗ್  (Rapting ) ಸೇವೆ ಆರಂಭದಲ್ಲಿದೆ. ಆದರೆ ಇದಕ್ಕಾಗಿ ರಾಜ್ಯ ಸರ್ಕಾರದಿಂದ ಮೊದಲ ಹಂಗಾಮಿನಲ್ಲಿ ಮಾತ್ರ ಕರಾರಿನ ಅನುಸಾರ ಸಾವರ್ಡೆ ಪಂಚಾಯತಿಗೆ 50,000 ರೂ ನಿಧಿ ಲಭಿಸಿದೆ. ಕಳೆದ 8 ಹಂಗಾಮಿನಲ್ಲಿ ಕರಾರಿನ ಅನುಸಾರ ರಾಜ್ಯ ಸರ್ಕಾರದಿಂದ ಪಂಚಾಯತಿಗೆ ಒಂದು ರೂಪಾಯಿಯೂ ಲಭಿಸಿಲ್ಲ. ಇದರಿಂದಾಗಿ ಸಾವರ್ಡೆ ಪಂಚಾಯತ ಮಂಡಳ ಆಕ್ರಮಣ ನಿಲುವು ತಳೆದಿದೆ. ರಾಜ್ಯ ಸರ್ಕಾರವು ಬಾಕಿ ಇರುವ ಎಲ್ಲ ವರ್ಷಗಳ ಹಣವನ್ನು ಕೂಡಲೇ ಪಂಚಾಯತಿಗೆ ನೀಡದಿದ್ದರೆ ರಿವರ್ ರ್ಯಾಪ್ಟಿಂಗ್ ಬಂದ ಮಾಡುವುದಾಗಿ ಹೇಳಿದೆ.

ಗೋವಾದಲ್ಲಿ ಕಳೆದ 8 ವರ್ಷಗಳ ಹಿಂದೆ ಮಹದಾಯಿ ವಾಟರ್ ರಿವರ್ ರ್ಯಾಪ್ಟಿಂಗ್ ಆರಂಭಗೊಳಿಸುವ ಮುನ್ನ ಸಾವರ್ಡೆ ಮತ್ತು ನಗರಗಾಂವ ಪಂಚಾಯತಿಗಳ ನಡುವೆ ಕರಾರು ಮಾಡಿಕೊಂಡಿತ್ತು. ಈ ಕರಾರಿನ ಅನುಸಾರ ಪ್ರತಿ ಹಂಗಾಮಿನಲ್ಲಿ ಈ ಎರಡೂ ಪಂಚಾಯತಿಗಳಿಗೆ ಪ್ರತ್ಯೇಕವಾಗಿ 50,000 ರೂ ಹಣ ನೀಡುವುದಾಗಿ ಹೇಳಿತ್ತು. ಈ ಹಣವು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು.

ಸಾವರ್ಡೆ ಪಂಚಾಯತ ಗ್ರಾಮ ಸಭೆಯಲ್ಲಿ ಪಂಚಾಯತ ಉಪಾಧ್ಯಕ್ಷ ಶಿವಾಜಿ ದೇಸಾಯಿ ಮಾಹಿತಿ ನೀಡಿ- ಕಳೆದ ಅನೇಕ ವರ್ಷಗಳಿಂದ ಮಹದಾಯಿ ರಿವರ್ ರ್ಯಾಪ್ಟಿಂಗ್ ಹಣ ಪಂಚಾಯತಿಗೆ ಲಭಿಸಿಲ್ಲ. ಈ ಕುರಿತು ಸರ್ಕಾರಕ್ಕೂ ಪತ್ರ ಬರೆದಿದ್ದೇವೆ. 8 ವರ್ಷಗಳ ಹಣವನ್ನು ಪಂಚಾಯತಿಗೆ ಮಂಜೂರು ಮಾಡದಿದ್ದರೆ ರಿವರ್ ರ್ಯಾಪ್ಟಿಂಗ್ ಬಂದ್ ಮಾಡಲಾಗುವುದು ಎಂಬ ನಿರ್ಣಯವನ್ನು ಪಂಚಾಯತಿ ತೆಗೆದುಕೊಂಡಿದೆ ಎಂಬ ಮಾಹಿತಿ ನೀಡಿದರು.