ಸುದ್ಧಿಕನ್ನಡ ವಾರ್ತೆ
ಪಣಜಿ: ಕಾರವಾರದ ಶಾಸಕ ಸತೀಶ್ ಸೈಲ್ ವಿರುದ್ಧ ಅಕ್ರಮ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಅಧಿಕಾರಿಗಳು ಅಗಷ್ಟ 13 ಮತ್ತು 14 ರಂದು ಕಾರವಾರ, ಗೋವಾ, ಮುಂಬಯಿ ಹಾಗೂ ನವದೆಹಲಿಯಲ್ಲಿ ಧಾಳಿ ನಡೆಸಿ ಮನಿ ಲ್ಯಾಂಡ್ರಿಂಗ್ ಪ್ರತಿಬಂಧ ಖಾಯ್ದೆಯ ಅಡಿಯಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಶಾಸಕ ಸತೀಶ್ ಕೃಷ್ಣ ಉರ್ಫ ಸತೀಶ್ ಸೈಲ್ ಹಾಗೂ ಇತರ ವ್ಯಕ್ತಿ, ಸಂಸ್ಥೆಯ ವಿರುದ್ಧ ನಡೆಯುತ್ತಿರುವ ತನಿಖೆಯ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದೆ.

ಕಾರವಾರದ ಶಾಸಕ ಸತೀಶ್ ವಿರುದ್ಧ ವಿಶೇಷ ನ್ಯಾಯಾಲಯವು ಈ ಎಲ್ಲರ ವಿರುದ್ಧ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿದಂತೆ ಕಾರ್ಯಾಚರಣೆಗೆ ಸೂಚನೆ ನೀಡುತ್ತು. ಇಡಿ ಧಾಳಿಯಲ್ಲಿ ಹಲವು ಮಹತ್ವದ ಕಾಗದಪತ್ರಗಳು, ಈಮೇಲ್ ರೆಕಾರ್ಡ, 1.68 ಕೋಟಿ ನಗದು, 6.75 ಕಿಲೊ ಬಂಗಾರ, ಜಫ್ತಿ ಮಾಡಿದ್ದಾರೆ.
ಇಷ್ಟೇ ಅಲ್ಲದೆಯೇ ಸುಮಾರು 14.13 ಕೋಟಿ ಬ್ಯಾಂಕ್ ಬ್ಯಾಲೆನ್ಸ ಜಫ್ತಿ ಮಾಡಲಾಗಿದೆ. ಸತೀಶ್ ಸೈಲ್ ರವರು ಉತ್ತರಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಶಾಸಕರಾಗಿದ್ದಾರೆ.