ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಬುಧವಾರದಿಂದ ನಿರಂತರ ಮಳೆ ದಾಖಲಾಗಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ ಭಾರಿ ಮಳೆಯಾಗಿದೆ. ಮಧ್ಯಾಹ್ನದ ನಂತರ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ. ಆಗಸ್ಟ್ 14 ಮತ್ತು 17 ರ ನಡುವೆ ಗೋವಾ ರಾಜ್ಯಾದ್ಯಂತ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಅದರಂತೆ, ಈ ನಾಲ್ಕು ದಿನಗಳವರೆಗೆ ಗೋವಾ ರಾಜ್ಯದಲ್ಲಿ ಯಲ್ಲೊ ಅಲರ್ಟ ನೀಡಲಾಗಿದೆ. ಆಗಸ್ಟ್ 18 ಮತ್ತು 19 ರ ನಡುವೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಣಜಿಯಲ್ಲಿ ಬುಧವಾರ ಬೆಳಿಗ್ಗೆ ಉತ್ತಮ ಮಳೆ ದಾಖಲಾಗಿದೆ. ಮಧ್ಯಾಹ್ನದಿಂದ ರಾತ್ರಿಯವರೆಗೆ ಮಳೆ ನಿರಂತರವಾಗಿ ಮುಂದುವರೆಯಿತು. 24 ಗಂಟೆಗಳಲ್ಲಿ ರಾಜ್ಯದಲ್ಲಿ ಸರಾಸರಿ 9.6 ಮಿಲಿಮೀಟರ್ ಮಳೆ ದಾಖಲಾಗಿದೆ. ಈ ಸಂದರ್ಭದಲ್ಲಿ, ದಾಬೋಲಿಂ ಮತ್ತು ಫೆÇೀಂಡಾದಲ್ಲಿ 21.4 ಮಿ.ಮೀ, ದಾಖಲಾಗಿದೆ. ಬುಧವಾರ, ಪಣಜಿಯಲ್ಲಿ ಗರಿಷ್ಠ ತಾಪಮಾನ 26.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಜೂನ್ 1 ರಿಂದ ಆಗಸ್ಟ್ 13 ರವರೆಗೆ ರಾಜ್ಯದಲ್ಲಿ ಸರಾಸರಿ 81.74 ಇಂಚು ಮಳೆ ದಾಖಲಾಗಿದೆ. ಈ ವರ್ಷ ಶೇ. 12.1 ರಷ್ಟು ಮಳೆ ಕಡಿಮೆಯಾಗಿದೆ. ಈ ಅವಧಿಯಲ್ಲಿ, ಧಾರಾಬಾಂದೋಡಾದಲ್ಲಿ ಅತಿ ಹೆಚ್ಚು 110.82 ಇಂಚು ಮಳೆ ದಾಖಲಾಗಿದೆ. ಸಾಂಗೆಯಲ್ಲಿ 108.40 ಇಂಚು, ವಾಳಪೈನಲ್ಲಿ 104.90 ಇಂಚು, ಕೆಪೆಯಲ್ಲಿ 101.54 ಇಂಚು ಮತ್ತು ಫೆÇೀಂಡಾದಲ್ಲಿ 88.85 ಇಂಚು ಮಳೆಯಾಗಿದೆ.