
ಸುದ್ಧಿಕನ್ನಡ ವಾರ್ತೆ
ಪಣಜಿ: ಮಹದಾಯಿ ನದಿಯ ರಕ್ಷಣೆಗಾಗಿ ಗೋವಾ ರಾಜ್ಯ ಸರ್ಕಾರ ಯಾವುದೇ ಕಠಿಣ ನಿಲುವು ಹೊಂದಿಲ್ಲ. ಗೋವಾ ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ನಡುವೆ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಹಸ್ಯ ಒಪ್ಪಂದ ಆಗಿರಬೇಕು ಎಂದು ಗೋವಾ ರಾಜ್ಯ ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ ಶಂಕೆ ವ್ಯಕ್ತಪಡಿಸಿದ್ದಾರೆ.
ಪರ್ವರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಗೋವಾ ಸರ್ಕಾರವು ಕರ್ನಾಟಕ ರಾಜ್ಯದ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗುತ್ತಿದೆ. ಮಹದಾಯಿಯು ಸಂಪೂರ್ಣವಾಗಿ ನಮ್ಮ ಕೈತಪ್ಪಿ ಹೋಗಿದೆ ಎಂದು ಯೂರಿ ಅಲೆಮಾಂವ ಠೀಕಿಸಿದರು.
ಗೋವಾ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕೊರೆಯಲಾಗುತ್ತಿದೆ. ಈ ಅಕ್ರಮದ ಕುರಿತು ಯಾವುದೇ ದಾಖಲೆಯಿಲ್ಲ. ಇದು ಪರಿಸರ ಮೇಲೆ ಭಾರಿ ಹಾನಿಯನ್ನುಂಟು ಮಾಡುತ್ತಿದೆ ಎಂದು ಯೂರಿ ಅಲೆಮಾಂವ ಆರೋಪಿಸಿದರು.