ಸುದ್ಧಿಕನ್ನಡ ವಾರ್ತೆ
ಗೋವಾದ ಮಡಗಾಂವನ ಮೋತಿಡೊಂಗರ್ ನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ರಾಯರ ಮಠದಲ್ಲಿ ಶನಿವಾರ ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗೋವಾದ ವಿವಿದೆಡೆಯಿಂದ ಆಗಮಿಸಿದ ಭಕ್ತಾದಿಗಳು ಪಂರಂಪರೆಯಂತೆ ಶಾಸ್ತ್ರೋಕ್ತವಾಗಿ ಯಜ್ಞೋಪವೀತ ಧಾರಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ವೈದಿಕರು ಉಪಾಕರ್ಮ ಹೋಮ ನಡೆಸಿ ಯಜ್ಞೋಪವೀತ ಧಾರಣಾ ಮಂತ್ರದ ಮೂಲಕ ನೆರೆದಿದ್ದ ಭಕ್ತಾದಿಗಳಿಗೆ ಯಜ್ಞೋಪವೀತವನ್ನು ಧಾರಣೆ ಮಾಡಿಸಿದರು.
ಗೋವಾದಲ್ಲಿ 19 87 ರಲ್ಲಿ ಈ ರಾಯರ ಮಠವು ಪ್ರತಿಷ್ಠಾಪನೆಯಾಗಿದೆ. ಅಂದಿನಿಂದ ಇಂತಹ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಗೋವಾದ ರಾಯರ ಮಠಕ್ಕೆ ಹುಬ್ಬಳ್ಳಿ,ಬೆಳಗಾವಿ, ಬಾಗಲಕೋಟೆ, ಮುಂಬಯಿ ಹಾಗೂ ವಿವಿಧ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಗೋವಾದ ಎಲ್ಲೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಗೋವಾದ ವಿವಿದೆಡೆ ನೆಲೆಸಿರುವ ಕನ್ನಡಿಗರು ಹೆಚ್ಚಾಗಿ ರಾಯರ ಮಠಕ್ಕೆ ಆಗಮಿಸಿ ತಮ್ಮ ಸೇವಾ ಕಾರ್ಯ ಕೈಗೊಳ್ಳುತ್ತಾ ಬಂದಿರುವುದು ವಿಶೇಷವಾಗಿದೆ.
ಇಂದು ಸಂಜೆ 7.30 ಕ್ಕೆ ಧ್ವಜಾರೋಹಣ ಧಾನ್ಯ ಮತ್ತು ಶ್ರೀ ಲಕ್ಷ್ಮೀ ಪೂಜೆ, 8.30 ಕ್ಕೆ ಸ್ವಸ್ತಿ ಪುಣ್ಯಾಹವಾಚನ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.