ಸುದ್ಧಿಕನ್ನಡ ವಾರ್ತೆ
ಗೋವಾ: ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354 ನೇಯ ಆರಾಧನಾ ಮಹೋತ್ಸವ ಅಗಷ್ಟ 10 ರಿಂದ 12 ರ ವರೆಗೆ ನಡೆಯಲಿದೆ.
ಈ ಆರಾಧನಾ ಮಹೋತ್ಸವದ ಅಂಗವಾಗಿ ಗೋವಾದ ಮಡಗಾಂವ ಮೋತಿ ಡೊಂಗರ್ ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಗಷ್ಟ 9 ರಂದು ಶಮಿವಾರ ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ ಧಾನ್ಯ ಮತ್ತು ಶ್ರೀ ಲಕ್ಷ್ಮೀ ಪೂಜೆ, 8.30 ಕ್ಕೆ ಸ್ವಸ್ತಿ ಪುಣ್ಯಾಹವಾಚನ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಅಗಷ್ಟ 10 ರಂದು ಭಾನುವಾರ ಬೆಳಿಗ್ಗೆ ಪೂರ್ವ ಆರಾಧನೆ ಕಾರ್ಯಕ್ರಮದಲ್ಲಿ ಆರತಿ ನಾಯಕ್ ಕಾಮತ್ ರವರಿಂದ ಬೆಳಿಗ್ಗೆ 11.30 ರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಅಗಷ್ಟ 11 ರಂದು ಸೋಮವಾರ ಮಧ್ಯ ಆರಾಧನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿಠ್ಠಲ್ ಭಜನ್ ರವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಅಗಷ್ಟ 12 ರಂದು ಮಂಗಳವಾರ ಉತ್ತರ ಆರಾಧನೆ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಶ್ರೀ ಪ್ರಹ್ಲಾದ ಮಹಾರಾಜರ ರಥೋತ್ಸವ ಮೆರವಣಿಗೆ ನಡೆಯಲಿದೆ.
ಇಷ್ಟೇ ಅಲ್ಲದೆಯೇ ಪ್ರತಿದಿನ 6 ಗಂಟೆಗೆ ಸುಪ್ರಭಾತಂ ಮತ್ತು ನಿರ್ಮಾಲ್ಯ ವಿಸರ್ಜನ, 7.30 ರಿಂದ ಅಷ್ಟೋತ್ತರ ಸ್ತೋತ್ರ ಪಾರಾಯಣ ಮತ್ತು ಪಂಚಾಮೃತ ಅಭಿಷೇಕ. 9 ಗಂಟೆಗೆ ಉತ್ಸವ ರಾಯರ ಪಾದಪೂಜೆ, ಮಧ್ಯಾನ್ಹ 1 ಗಂಟೆಗೆ ಮಹಾನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ. ಸಂಜೆ 7.30 ಕ್ಕೆ ಪಲ್ಲಕ್ಕಿ ಸೇವೆ, ರಥೋತ್ಸವ, ಸ್ವಸ್ತಿ ವಾಚನ, ಮಹಾಮಂಗಳಾರತಿ, ತೀರ್ಥಪ್ರಸಾದ ಕಾರ್ಯಕ್ರಮ ಜರುಗಲಿದೆ.
ರಾಯರ ಆರಾಧನಾ ಮಹೋತ್ಸವದ ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ-8088336631, 8610207876 ನ್ನು ಸಂಪರ್ಕಿಸಬಹುದಾಗಿದೆ.