ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬ ಕನ್ನಡಿಗರ ಹಲವು ವರ್ಷಗಳ ಕನಸು ನನಸಾಗುತ್ತಿದೆ. ಕರ್ನಾಟಕ ಸರ್ಕಾರವು ಗೋವಾದ ವೆರ್ಣಾದಲ್ಲಿ ನಿವೇಶನ ಖರೀದಿಸಿದೆ. ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತ ಸಂತಸದ ಸಂಗತಿ. ಇದಕ್ಕೆ ಕಾರಣೀಕರ್ತರಾದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್, ಕಾರ್ಯದರ್ಶಿಗಳಾದ ಪ್ರಕಾಶ ಮತ್ತೀಹಳ್ಳಿ ಹಾಗೂ ಗೋವಾದಲ್ಲಿ ಕನ್ನಡ ಭವನಕ್ಕೆ ಜಾಗ ಖರೀದಿಸಲು ಹೆಚ್ಚಿನ ಶೃಮ ವಹಿಸಿದ ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ರವರನ್ನು ಗೋವಾ ಕನ್ನಡ ಸಮಾಜ ಪಣಜಿ ಅಭಿನಂದಿಸಿದೆ.
ಗೋವಾದ ವಾಸ್ಕೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾ ಕನ್ನಡ ಸಮಾಜ ಪಣಜಿಯ ಕಾರ್ಯಕಾರಿ ಸಮೀತಿಯ ಪದಾಧಿಕಾರಿಗಳು ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಹಾಗೂ ಪತ್ನಿ ನೀಲಮ್ಮ ಮೇಟಿ ದಂಪತಿಗಳನ್ನು ಅಕ್ಷರ ನುಡಿಗಳ ಮೂಲಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಮಾತನಾಡಿ- “ಗೋವಾ ಕನ್ನಡ ಸಮಾಜ ಪಣಜಿ” ಸಂಸ್ಥೆಯು ಗೋವಾದ ರಾಜಧಾನಿಯಾದ ಪಣಜಿಯಲ್ಲಿ ನಾಲ್ಕು ದಶಕಗಳಿಂದ,ಕನ್ನಡ ನಾಡಿನ,ಭಾಷೆ, ಕಲೆ-ಸಂಸ್ಕøತಿ ಪರಂಪರೆ ,ಉಳಿಸಿ ಬೆಳೆಸುವದರ ಜೊತೆಗೆ ನಿರಂತರ ಕಾರ್ಯ ನಿರ್ವಹಿಸುತ್ತಾ ಬಂದಿದೆ,
ಹಲವಾರು ದಶಕಗಳಿಂದ ಗೋವಾದ ಸಮಸ್ಥ ಕನ್ನಡಿಗರಿಗೆ ಸಾಂಸ್ಕ್ರತಿಕ ಕಾರ್ಯಕ್ರಮ ಮಾಡಲು,ತನ್ನದೇ ಆದ ನಿವೇಶನವಾಗಲಿ ಭವನ ವಾಗಲಿ ಇರಲಿಲ್ಲವಾಗಿತ್ತು.ಪರಿಶ್ರಮದ ಹಾದಿಯಲ್ಲಿ ಶ್ರೇಯಸ್ಸಿನ ಪ್ರತಿಪಲ ಕಂಡ ತಾವು ತಮ್ಮದೇ ಆದ ವಿಶೇಷ ವ್ಯಕ್ತಿತ್ವದ ಕಾರ್ಯವೈಖರಿ,ಕನ್ನಡ ಭಾಷೆ,ಕನ್ನಡಿಗರ ಮೇಲಿನ ಅಭಿಮಾನ,ಪ್ರೀತಿ,ಕಾಳಜಿಯಿಂದ ತಮ್ಮ ಅಮೂಲ್ಯವಾದ ಸಮಯನೀಡಿ, ಪ್ರಾಧಿಕಾರ ಮತ್ತು ಸರ್ಕಾರದ ಅಧಿಕಾರಿಗಳ ಜೊತೆ ಉತ್ತಮ ಒಡನಾಟ,ಹಾಗೂ ಸೌಹಾರ್ದ ಸಂಭಂದ,ನಿರಂತರವಾಗಿ ಸಮರ್ಪಕ ಸಂಪರ್ಕ ವಿರಿಸಿಕೊಂಡು ತನು-ಮನ-ಧನ ಸಹಿತ, ಪೂರ್ಣ ಶ್ರಮದಿಂದ ಗೋವಾದ ವೆರ್ಣಾದಲ್ಲಿ “ಕನ್ನಡಭವನ” ಕ್ಕೆ ನಿವೇಶನ ಖರೀದಿಸಿ ಸಾಧನೆಯ ಸಾರ್ಥಕತೆ ಕಂಡಿದ್ದು ಇತಿಹಾಸ ಪುಟದ-ಸುವರ್ಣಾಕ್ಷರದಲ್ಲಿ ಬರೆದಿಡುವಂತ ಸಂತಸದ ಸುದ್ದಿ ಸಂಭ್ರಮ ತಂದಿದೆ ಎಂದರು.
ಇದು ಗೋವಾದ ಸಮಸ್ತ ಕನ್ನಡಿಗರು ಮನಪೂರ್ವಕವಾಗಿ ಮೆಚ್ಚುವಂತದ್ದು, ಯಾವುದೇ ಅಪೇಕ್ಷೆ, ನಿರೀಕ್ಷೆಯಿಲ್ಲದೆ ಅತ್ಯಗತ್ಯವಿರುವ ಕನ್ನಡಭವನದ ನಿವೇಶನ ಖರೀದಿಸಿದ್ದೀರಿ. ಜನ್ಮಭೂಮಿ,ಕನ್ನಡಾಂಬೆಯ ಆಶಿರ್ವಾದದಿಂದ ಕರ್ಮಭೂಮಿಯಲ್ಲಿ ಧರಣಿದೇವಿಯ ಅನುಗ್ರಹದಿಂದ ತಮ್ಮ ನೇತ್ರತ್ವದಲ್ಲಿ ಶೀಘ್ರಾತಿಶೀಘ್ರವಾಗಿ ಕನ್ನಡಭವನ ನಿರ್ಮಾಣವಾಗಿ ಕಂಗೊಳಿಸಲಿ,ಎಂದು ಹಾರೈಸುತ್ತಾ ನಮ್ಮ ಸಂಸ್ಥೆಯ ಸಹಕಾರ ಮತ್ತು ಬೆಂಬಲ- ಸದಾ ನಿಮ್ಮೊಂದಿಗೆ ಇರುತ್ತದೆ ಈ ಮೂಲಕ ತಿಳಿಸುತ್ತಾ ನಿವೇಶನ ಖರಿದಿಸಲು ಸಂಪೂರ್ಣ ಶ್ರಮವಹಿಸಿದ ತಮಗೆ ಗೋವಾ ಕನ್ನಡ ಸಮಾಜ.ಪಣಜಿ, ಯ ಅಧ್ಯಕ್ಷರು ಹಾಗು ಸಮಸ್ತ ಪಧಾಧಿಕಾರಿಗಳು ತಮಗೆ ಭಕ್ತಿಪೂರ್ವಕವಾಗಿ,ಶ್ರದ್ಧಾಪೂರ್ವಕವಾಗಿ, ಭವ್ಯಪೂರ್ವಕವಾಗಿ,ಮನಪೂರ್ವಕವಾಗಿ,ತಮ್ಮ ಪ್ರಾಮಾಣಿಕ ಕಾರ್ಯ ವೈಖರಿ ಪ್ರಶಂಸಿಸಿ,ಆಕ್ಷರನುಡಿಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಸಿದ್ಧಣ್ಣ ಮೇಟಿ ದಂಪತಿಗಳಿಗೆ ಅಕ್ಷರ ನುಡಿಗಳ ಮೂಲಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಪ್ರಶಾಂತ ಜೈನ್, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಸದಸ್ಯರಾದ ಶ್ಯಾಮಸುದ್ದೀನ್ ಸೊಲ್ಲಾಪುರಿ, ಪ್ರಕಾಶ್ ಭಟ್, ಮಂಜುನಾಥ ದೊಡ್ಡಮನಿ, ಸಿ.ಜಿ.ಕನ್ನೂರ, ನೀರಜ್ ದಿವಾಕರ್, ಮತ್ತಿತರರು ಉಪಸ್ಥಿತರಿದ್ದರು.