ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯವು ಎಲ್ಲ ಕ್ಷೇತ್ರದಲ್ಲಿಯೂ ಸ್ವಾವಲಂಭಿಯಾಗಬೇಕು ಎಂಬ ಉದ್ದೇಶದಿಂದ ಗೋವಾ ಸಕಾಧರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬಹುತೇಕ ದೈನಂದಿನ ಬಳಕೆ ವಸ್ತುಗಳಿಗಾಗಿ ಗೋವಾ ರಾಜ್ಯವು ಕರ್ನಾಟಕ ರಾಜ್ಯವನ್ನೇ ಅವಲಂಭಿಸಿದೆ. ಇದೀಗ ಗೋವಾದಲ್ಲಿ ತೆಂಗಿನ ಕಾಯಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಿಂದ ತರಿಸಲಾಗುತ್ತಿದೆ.

ಗೋವಾದಲ್ಲಿ ತೆಂಗಿನ ಕಾಯಿ ದರ ಗಗನಕ್ಕೇರಿದೆ. ಗೋವಾಕ್ಕೆ ಸದ್ಯ ಕರ್ನಾಟಕ ಮತ್ತು ತಮಿಳುನಾಡಿನಿಂದ ಪ್ರತಿ ಕೆಜಿಗೆ 85 ರೂ ದರದಂತೆ ತರಿಸಿಕೊಳ್ಳಲಾಗುತ್ತಿದೆ. ಸದ್ಯ ಗೋವಾದಲ್ಲಿ ಒಂದು ತೆ<ಗಿನ ಕಾಯಿಗೆ 70 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗಣೇಶ ಚತುರ್ಥಿಗೆ ತೆಂಗಿನ ಕಾಯಿ ದರ 100 ರೂ ಗೆ ತಲುಪುವ ಭೀತಿಯನ್ನು ತೆಂಗಿನ ಕಾಯಿ ಮಾರಾಟಗಾರರು ವ್ಯಕ್ತಪಡಿಸಿದ್ದಾರೆ.

ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾದಲ್ಲಿ ವಾಸಿಸುತ್ತಿರುವ ಜನರಿಗಿಂದ ಹೆಚ್ಚಾಗಿ ದೇಶ ವಿದೇಶಿಯ ಪ್ರವಾಸಿಗರೇ ಆಗಮಿಸುತ್ತಾರೆ. ಗೋವಾದಲ್ಲಿ ಆಹಾರದ ಬಹುಮುಖ್ಯ ಅಂಗವೇ ತೆಂಗಿನ ಕಾಯಿ ಆಗಿದೆ. ಗೋವಾದಲ್ಲಿ ತೆಂಗಿನ ಕಾಯಿಯಷ್ಟೇ ಬೇಡಿಕೆ ಎಳನೀರಿಗೆ ಕೂಡ ಇದೆ. ಗೋವಾದಲ್ಲಿ ಸದ್ಯ 60 ರೂ ದರದಲ್ಲಿ ಎಳನೀರು ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕದಿಂದ ಗೋವಾಕ್ಕೆ ಪ್ರತಿ ಕೆಜಿಗೆ 85 ರೂ ದರದಲ್ಲಿ ತೆಂಗಿನ ಕಾಯಿಯನ್ನು ತರಿಸಿಕೊಳ್ಳಲಾಗುತ್ತಿದೆ. ಆದರೆ ಗೋವಾದಲ್ಲಿ ಪ್ರತಿ ತೆಂಗಿನ ಕಾಯಿಗೆ 70 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಶ್ರಾವಣ ಮಾಸವಾಗಿರುವುದರಿಂದ ದೇವಸ್ಥಾನ ಮತ್ತು ಮನೆ ಮನೆಗಳಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಕೂಡ ಹೆಚ್ಚಾಗಿ ತೆಂಗಿನ ಕಾಯಿ ಬಳಕೆಯಾಗುತ್ತದೆ. ಗೋವಾ ರಾಜ್ಯವು ಬಹುತೇಕ ದೈನಂದಿನ ಉಪಯುಕ್ತ ಆಹಾರ ಬಳಕೆಗಳಿಗೆ ಕರ್ನಾಟಕವನ್ನೇ ಅವಲಂಭಿಸಿದೆ.