ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯದಲ್ಲಿ 61 ದಿನಗಳ ಮೀನುಗಾರಿಕೆ ನಿರ್ಬಂಧ ತೆರವಿನ ನಂತರ ಅಗಷ್ಟ 1 ರಿಂದ ಗೋವಾದಲ್ಲಿ ಮೀನುಗಾರಿಕೆ ಪುನರಾರಂಭಗೊಂಡಿದೆ. ಆದರೆ ತಮ್ಮ ತಮ್ಮ ಊರಿಗೆ ತೆರಳಿದ್ದ ಹೊರ ರಾಜ್ಯದ ಮೀನುಗಾರರು ಇದುವರೆಗೂ ಗೋವಾಕ್ಕೆ ಬಾರದ ಕಾರಣ ಶೇ 75 ರಷ್ಟು ಮೀನುಗಾರಿಕಾ ಬೋಟ್ ಗಳು ಮೀನುಗಾರಿಕೆಗೆ ತೆರಳದೆಯೇ ದಡದಲ್ಲಿಯೇ ನಿಂತಿರುವಂತಾಗಿದೆ.
ಗೋವಾದಲ್ಲಿ ಮೀನುಗಾರಿಕೆ ಸೀಜನ್ ಅಗಷ್ಟ 1 ರಿಂದ ಆರಂಭಗೊಂಡಿದೆ. ಅಗಷ್ಟ 1 ರಂದು ಕೆಲವೇ ಕೆಲವು ಮೀನುಗಾರಿಕಾ ಬೋಟ್ ಗಳು ಮೀನುಗಾರಿಕೆಗೆ ತೆರಳಿದ್ದವು. ಮೀನುಗಾರಿಕೆಗೆ ತೆರಳಿದ್ದವರಿಗೆ ಭಾರಿ ಪ್ರಮಾಣದಲ್ಲಿ ಮೀನಗಳು ಬಲೆಗೆ ಬಿದ್ದಿವೆ.
ಗೋವಾದ ಮೀನುಗಾರಿಕಾ ಬೋಟ್ ಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕ ಮೀನುಗಾರರು ಕರ್ನಾಟಕದ ವಿವಿಧ ಭಾಗಗಳಿಂದ ಬಂದವರೇ ಆಗಿದ್ದಾರೆ. ಗೋವಾದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಿದ ನಂತರ ಕರ್ನಾಟಕದ ಮೀನುಗಾರು ಹಾಗೂ ಇತರ ರಾಹ್ಯಗಳಿಂದ ಬಂದ ಮೀನುಗಾರರು ತಮ್ಮ ರಾಜ್ಯಕ್ಕೆ ವಾಪಸ್ಸಾಗಿದ್ದರು. ಇದೀಗ ಗೋವಾದಲ್ಲಿ 61 ದಿನಗಳ ಮೀನುಗಾರಿಕೆ ನಿರ್ಬಂಧದ ನಂತರ ಇದೀಗ ಅಗಷ್ಟ 1 ರಿಂದ ಗೋವಾದಲ್ಲಿ ಮೀನುಗಾರಿಕೆ ಆರಂಭಗೊಂಡಿದೆ. ಆದರೆ ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ ಮೀನುಗಾರರು ಗೋವಾದಲ್ಲಿ ವಾಪಸ್ಸಾಗದ ಕಾರಣ ಶೇ 75 ರಷ್ಟು ಮೀನುಗಾರಿಕಾ ಬೋಟ್ ಗಳು ದಡದಲ್ಲಿಯೇ ನಿಂತಿರುವಂತಾಗಿದೆ.