ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಗಣೇಶೋತ್ಸವದ ಲಾಟರಿ ಖರೀದಿಗೆ ಹಗಲಿರುಳೆನ್ನದೆಯೇ ಎರಡು ಕಿ.ಮಿ ವರೆಗೂ ಸರತಿ ಸಾಲಲ್ಲಿ ನಿಂತು ಲಾಟರಿ ಖರದಿ ಮಾಡುತ್ತಾರೆ ಎಂಬುದು ಆಶ್ಚರ್ಯವೆನಿಸಿದರೂ ಸತ್ಯ. ಹೌದು ಇಂತಹ ದೃಶ್ಯ ಗೋವಾದ ಕೆಫೆ ಸಾರ್ವಜನಿಕ ಗಣೇಶೋತ್ಸವ ಮಂಡಳದಲ್ಲಿ ಕಾಣಲು ಸಾಧ್ಯ. ಗೋವಾದಲ್ಲಿ ಕೆಫೆ ಗಣೇಶೋತ್ಸವ ಲಾಟರಿ ಭಾರಿ ಪ್ರಸಿದ್ಧಿ ಪಡೆದಿದ್ದು ಗೋವಾದ ಮೂಲೆ ಮೂಲೆಯಿಂದ ಜನರು ಲಾಟರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಗೋವಾದ ಕೆಫೆ ಸಾರ್ವಜನಿಕ ಗಣೇಶೋತ್ಸವ ಮಂಡಳದ ಲಾಟರಿ ಟಿಕೇಟ್ ಖರೀದಿಗೆ ಗೋವಾ ರಾಜ್ಯದ ಮೂಲೆ ಮೂಲೆಯಿಂದ ಜನರು ಬರುತ್ತಿದ್ದು 2 ಕಿಮಿ ದೂರದ ವರೆಗೂ ಲಾಟರಿ ಖರೀದಿಗೆ ಜನ ಹಗಲಿರುಳೆನ್ನದೆಯೇ ಸರತಿ ಸಾಲಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ವರ್ಷವೂ ಕೂಡ ಇಲ್ಲಿ ಲಾಟರಿ ಟಿಕೇಟ್ ಖರೀದಿಗೆ ಇದೇ ರೀತಿ ಜನಜಾತ್ರೆ ಕಂಡುಬಂದಿತ್ತು. ಕಾರಣವೆಂದರೆ ಕಳೆದ ವರ್ಷ ಇಲ್ಲಿ ಗಣೇಶೋತ್ಸವ ಲಾಟರಿಗೆ ಹತ್ತಾರು ಐಶಾರಾಮಿ ಕಾರುಗಳನ್ನು ಇಡಲಾಗಿತ್ತು.
ಪ್ರಸಕ್ತ ವರ್ಷವೂ ಕೂಡ ಗೋವಾದಲ್ಲಿ ಕೆಫೆ ಗಣೇಶೋತ್ಸವ ಮಂಡಳಿಯ ಲಾಟರಿ ಹೆಚ್ಚಿನ ಆರ್ಕಣೆ ಪಡೆದುಕೊಂಡಿದೆ. ಕಳೆದ ವರ್ಷದಂತೆಯೇ ಹತ್ತಕ್ಕೂ ಹೆಚ್ಚು ಐಶಾರಾಮಿ ಬಹುಮಾನವನ್ನು ಇಟ್ಟಿರುವುದು ಜನಾಕರ್ಷಣೆಗೆ ಕಾರಣವಾಗಿದೆ. ಇಲ್ಲಿನ ಲಾಟರಿ ಖರೀದಿಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿದೆ. ಸದ್ಯ ಇಲ್ಲಿ ಪೋಲಿಸ್ ಬಿಗಿ ಬಂದೋಬಸ್ತ ಕಲ್ಪಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.