ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಸಿನೆಮಾ ಚಿತ್ರೀಕರಣದ ವಾತಾವರಣವಿದೆ. ನಾನು ಇನ್ನೂ ಕೂಡ ಚಿತ್ರರಂಗದಲ್ಲಿಯೇ ಇದ್ದೇನೆ, ಈ ಹಿನ್ನೆಲೆಯಲ್ಲಿಯೇ ಗೋವಾಕ್ಕೆ ಭೇಟಿ ನೀಡಿದ್ದೇನೆ. ನನಗೆ ಇಲ್ಲಿ ಹಲವು ಚಲನಚಿತ್ರ ಚಿತ್ರೀಕರಣ ಮಾಡುವದಿದೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಸಣ್ಣ ಮಕ್ಕಳಿಗಾಗಿ ಫಿಲ್ಮ ಅಕಾಡಮಿ ಆರಂಭಿಸುವ ಇಚ್ಛೆಯಿದೆ ಎಂದು ಪ್ರಸಿದ್ಧ ಚಿತ್ರ ನಟಿ ಜಯಪ್ರದಾ ಹೇಳಿದ್ದಾರೆ.

ಚಿತ್ರನಟಿ ಜಯಪ್ರದಾ ರವರು ಮಾಜಿ ರಾಜ್ಯಸಭಾ ಸದಸ್ಯ ವಿನಯ ತೆಂಡುಲ್ಕರ್ ರವರೊಂದಿಗೆ ಗೋವಾದ ಮಡಗಾಂವನಲ್ಲಿರುವ ರವೀಂದ್ರ ಭವನಕ್ಕೆ ಭೇಟಿ ನೀಡಿ ಪರಿಸರವನ್ನು ವೀಕ್ಷಿಸಿದರು. ಇಷ್ಟೇ ಅಲ್ಲದೆಯೇ ಮಡಗಾಂವ ಫಟೊರ್ಡಾದ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳೊಂದಿಗೆ ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ನಂತರ ವಾಸ್ಕೋ ಬೈನಾದ ರವೀಂದ್ರ ಭವನಕ್ಕೆ ಭೇಟಿ ನೀಡಿದರು.

ಗೋವಾದಲ್ಲಿ ಚಿಕ್ಕ ಮಕ್ಕಳಿಗಾಗಿ ಫಿಲ್ಮ ಅಕಾಡಮಿ ಆರಂಭಿಸುವ ಆಸೆ ಹೊಂದಿದ್ದೇನೆ ಎಂದು ಚಿತ್ರನಟಿ ಜಯಪ್ರದಾ ನುಡಿದರು.