ಸುದ್ಧಿಕನ್ನಡ ವಾರ್ತೆ

ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯಲ್ಲಿ  (NIO) ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳಿಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆ ನಡೆಸಲಾಯಿತು. ಇಬ್ಬರು ವ್ಯಕ್ತಿಗಳು ಡಮ್ಮಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಹಾಜರಾಗಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ, ಪಣಜಿ ಪೆÇಲೀಸರು ಉತ್ತರ ಪ್ರದೇಶದ ಸುನಿಲ್ ಕುಮಾರ್ ಮತ್ತು ಪ್ರಶಾಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

POLICE  ಮೂಲಗಳ ಪ್ರಕಾರ, ಎನ್ ಐಒ ನ ಆಡಳಿತ ನಿಯಂತ್ರಕ ರಾಕೇಶ್ ಶುಕ್ಲಾ ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ, ಮಂಗಳವಾರ ಬೆಳಿಗ್ಗೆ, ಡೋನಾಪಾವ್ಲಾದ NIO ನಲ್ಲಿ ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲಾಯಿತು.

ಅಭ್ಯರ್ಥಿಗಳನ್ನು ಪರಿಶೀಲಿಸಿದಾಗ, ಶಂಕಿತ ಸುನಿಲ್ ಕುಮಾರ್ ಬಳಿ ನಕಲಿ ದಾಖಲೆಗಳು ಕಂಡುಬಂದಿವೆ. ಅವರನ್ನು ಸಂಪೂರ್ಣವಾಗಿ ವಿಚಾರಣೆ ನಡೆಸಿದಾಗ, ಪ್ರಶಾಂತ್ ಕುಮಾರ್ ಬದಲಿಗೆ ಅವರು ಪರೀಕ್ಷೆಗೆ ಹಾಜರಾಗಲು ಬಂದಿರುವುದು ಬೆಳಕಿಗೆ ಬಂದಿತು. ಈ ಮಾಹಿತಿಯನ್ನು ಪಣಜಿ ಪೆÇಲೀಸರಿಗೆ ನೀಡಲಾಯಿತು. ಪೆÇಲೀಸ್ ಇನ್ಸ್‍ಪೆಕ್ಟರ್ ವಿಜಯ್‍ಕುಮಾರ್ ಚೋಡಣಕರ್ ಅವರ ಮಾರ್ಗದರ್ಶನದಲ್ಲಿ ಸಬ್-ಇನ್‍ಸ್ಪೆಕ್ಟರ್ ಗಳಾದ ಮಂಜುನಾಥ್ ನಾಯಕ್, ಸಾಹಿನ್ ಶೆಟಯೆ ಮತ್ತು ಕಾನ್ಸ್ ಟೇಬಲ್ ವಿಕಾಸ್ ನಾಯಕ್ ಅವರ ತಂಡವು ಶಂಕಿತ ಸುನಿಲ್ ಕುಮಾರ್ ಮತ್ತು ಪ್ರಶಾಂತ್ ಕುಮಾರ್ ಅವರನ್ನು ಬಂಧಿಸಿತು. ಪೆÇಲೀಸರು ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.