ಸುದ್ಧಿಕನ್ನಡ ವಾರ್ತೆ
ಗೋವಾಕ್ಕೆ ಬಂದಿದ್ದ ಪುಣೆಯ ಪ್ರವಾಸಿಗನೋರ್ವ ಸೆಕ್ಯುರಿಟಿ ಗಾರ್ಡನ ಮೇಲೆ ಗುಂಡಾಗಿರಿ ನಡೆಸಿ ಕಾರನ್ನು ಅವನ ಮೇಲೆ ಹತ್ತಿಸುವ ಪ್ರಯತ್ನ ನಡೆಸಿದ ನಡೆದಿದೆ. ಈ ಘಟನೆಯಲ್ಲಿ ಸೆಕ್ಯುರಿಟಿ ಗಾರ್ಡ ಕೈ ಮತ್ತು ಕಾಲು ಮುರಿದಿದ್ದು, ಚಿಕಿತ್ಸೆಗಾಗಿ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣಜುಣ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಸೆಕ್ಯುರಿಟಿಯ ಹೆಸರು- ಉತ್ತಮ ದಾಸ್(30, ಅಸ್ಸಾಂ) ಎಂದಾಗಿದೆ. ಈ ಘಟನೆಯ ಆರೋಪಿ ಸೂರಜ್ ಚಂದ್ರಕಾಂತ ಮೆಹ್ತಾ (ಪುಣೆ) ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿ ಸೂರನ್ ಈತನು ಗೋವಾ ಪ್ರವಾಸಕ್ಕೆ ಬಂದಿದ್ದ. ಈತ ಗೋವಾದ ವಾಗಾತೋರ್ ವಿಲ್ಹಾ ಅಪಾರ್ಟಮೆಂಟ್ ನಲ್ಲಿ ತಂಗಿದ್ದ. ವಿಲ್ಹಾ ಅಪಾರ್ಟಮೆಂಟ್ ನಲ್ಲಿ ಉತ್ತಮ ದಾಸ್ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಯು ಕಾರಿನಲ್ಲಿ ಪದೆ ಪದೆ ಬಂದು ಹೋಗುವುದು ಮಾಡುತ್ತಿದ್ದ. ಗೇಟ್ ಬಳಿ ಕುಳಿತಿದ್ದ ಸೆಕ್ಯುರಿಟಿ ಗಾರ್ಡನ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದಾಗ ಸೆಕ್ಯುರಿಟಿ ಗಾರ್ಡ ಗಂಭೀರವಾಗಿ ಗಾಯಗೊಂಡ ಎನ್ನಲಾಗಿದೆ. ಈತನ ಕೈ ಮತ್ತು ಕಾಲು ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರವಾಸಿಗನು ತಾನು ಪದೆ ಪದೆ ಬಂದು ಹೋಗುತ್ತಿರುವುದರಿಂದ ಗೇಟ್ ಬಂದ್ ಮಾಡಬಾರದು, ತೆರೆದೇ ಇಡಬೇಕು ಎಂದು ಸೆಕ್ಯುರಿಟಿಗೆ ಅವಾಜ್ ಹಾಕಿದ್ದ. ಇದೇ ಸಿಟ್ಟಿನಲ್ಲಿ ಪ್ರವಾಸಿಗ ಸೆಕ್ಯುರಿಟಿ ಗಾರ್ಡ ಮೇಲೆ ಕಾರನ್ನು ಹತ್ತಿಸಲು ಪ್ರಯತ್ನಿಸಿದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಣಜುಣ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪೋಲಿಸರು ಆರೋಪಿಯನ್ನು ಬಂಧಿಸಿದರು, ಗಾಯಗೊಂಡ ಸೆಕ್ಯುರಿಟಿ ಗಾರ್ಡನನ್ನು ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಿದರು.