ಸುದ್ಧಿಕನ್ನಡ ವಾರ್ತೆ
ಆಕಳಿನ ಹೊಟ್ಟೆಯಲ್ಲಿ ರಾಶಿಯಾಗಿದ್ದ 15 ಕೆಜಿ ಪ್ಲಾಸ್ಟಿಕ್ ನ್ನು (Plastic) ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದ ಘಟನೆ ಗೋವಾದ ವಾಳಪೈ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದಿದೆ.

ವಾಳಪೈ ಭಾಗದಲ್ಲಿ ಆಕಳೊಂದು ರಸ್ತೆಯ ಪಕ್ಕದಲ್ಲಿ ಬಿದ್ದಿರುವುದನ್ನು ಶ್ರೀರಾಮ ಗೋಶಾಲೆಗೆ (Shriram Goshala)ತರಲಾಗಿತ್ತು. ಅನಾರೋಗ್ಯದ ಕಾರಣ ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿರುವುದು ಕಂಡುಬಂತು. ಗೋಶಾಲೆಯ ತಂಡ ಹಾಗೂ ಪಶುವೈದ್ಯಕೀಯ ಇಲಾಖೆ ಜಂಟಿ ಪ್ರಯತ್ನವು ಹಸುವು ಗುಣಮುಖವಾಗಲು ಸಾಧ್ಯವಾಯಿತು. ಹಸುವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ವೈದ್ಯರು ಯಶಸ್ವಿಯಾಗಿ ಆಕಳ ಹೊಟ್ಟೆಯೊಳಗಿದ್ದ 15 ಕೆಜಿ ಪ್ಲಾಸ್ಟಿಕ್ (15 kg of plastic) ಹೊರ ತೆಗೆದಿದ್ದಾರೆ.

ಸ್ವಚ್ಛ ಭಾರತ ಅಭಿಯಾನದ (Swachh Bharat Abhiyan) ಮೂಲಕ ದೇಶಾದ್ಯಂತ ಸರ್ಕಾರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಮುಕ್ತವಾಗಿರಿಸಲು ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಗೋವಾ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಆದರೆ ಇದನ್ನೂ ಮೀರಿ ಹಲವರು ಪ್ಲಾಸ್ಟಿಕ್ ಕಸವನ್ನು ರಸ್ತೆಯ ಬದಿಯಲ್ಲಿ ಎಸೆಯುತ್ತಾರೆ. ಇದನ್ನು ತಿಂದ ದನಕರುಗಳು ಸಾವನ್ನಪ್ಪುತ್ತವೆ.

ಸಾರ್ವಜನಿಕರು ರಸ್ತೆಗಳಲ್ಲಿ ಪ್ಲಾಸ್ಟಿಕ್ ಅನ್ನು ಎಸೆಯದಂತೆ ಗೋಶಾಲೆಯ ಸದಸ್ಯರು ಒತ್ತಾಯಿಸಿದ್ದಾರೆ ಮತ್ತು ಅಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

(Goshala members have urged the public not to throw plastic on the roads and appealed to the government to take strict measures to prevent such incidents.)