ಸುದ್ಧಿಕನ್ನಡ ವಾರ್ತೆ
ಬೆಳಗಾವಿ-ಗೋವಾ ಸಂಪರ್ಕಿಸುವ ಅನಮೋಡ ಘಾಟ್ ಹೆದ್ದಾರಿ ಗೋವಾ ಭಾಗದ ರಸ್ತೆ ಕುಸಿದಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ.
ಗೋವಾ-ಬೆಳಗಾವಿ(Belagavi-Goa) ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಶನಿವಾರ ಬೆಳಗಿನ ಜಾವ ಅನಮೋಡ ಘಾಟ್ ರಸ್ತೆ ಕುಸಿತಗೊಂಡಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು ರಸ್ತೆಯ ಅರ್ಧಕ್ಕೂ ಹೆಚ್ಚು ಭಾಗ ಕುಸಿದುಹೋಗಿದೆ. ಇನ್ನಷ್ಟು ಕುಸಿಯುವ ಆತಂಕದಲ್ಲಿದೆ.
ಕಳೆದ ಕೆಲ ದಿನಗಳಿಂದ ಗೋವಾ-ಬೆಳಗಾವಿ ಸಂಪರ್ಕಿಸುವ ಅನಮೋಡ ಮತ್ತು ಚೋರ್ಲಾ ಘಾಟ್ ರಸ್ತೆಯಲ್ಲಿ ಓಡಾಟ ನಡೆಸಲು ಪ್ರಯಾಣಿಕರು ಭಯ ಪಡುವಂತಾಗಿದೆ. ಒಂದಾದಮೇಲೊಂದು ರಸ್ತೆಯು ಪ್ರಸಕ್ತ ಮಳೆಗಾಲದಲ್ಲಿ ಕುಸಿತಕ್ಕೊಳಗಾಗುತ್ತಿದೆ. ಇದರಿಂದಾಗಿ ಗೋವಾದಿಂದ ಬೆಳಗಾವಿ ಭಾಗಕ್ಕೆ ತೆರಳುವವರು ಅಥವಾ ಬೆಳಗಾವಿಯಿಂದ ಗೋವಾಕ್ಕೆ ಬರುವವರು ಯಾವ ರಸ್ತೆಯಲ್ಲಿ ಬರುವುದು ಉತ್ತಮ ಎಂದು ನೀಖರವಾಗಿ ಹೇಳಲು ಸಾಧ್ಯವಿಲ್ಲ ಎಂಬಂತಾಗಿದೆ.
ಗೋವಾದಿಂದ ಬೆಖಗಾವಿ-ಹುಬ್ಬಳ್ಳಿ ಭಾಗಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಅನಮೋಡ ಮತ್ತು ಚೋರ್ಲಾ ಘಾಟ್ ರಸ್ತೆ. ಇದರಿಂದಾಗಿ ಸಹಜವಾಗಿಯೇ ಈ ಮಾರ್ಗದಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ಸದ್ಯ ಅನಮೋಡ ಘಾಟ್ ರಸ್ತೆ ಕುಸಿದಿರುವುದು ಸಂಚಾರಕ್ಕೆ ಅಡ್ಡಿಯಾಗಿದೆ.