ಸುದ್ಧಿಕನ್ನಡ ವಾರ್ತೆ
ಪಣಜಿ: 21 ವರ್ಷದೊಳಗಿನ ಮಕ್ಕಳಿರುವ ವಿಧವೆಯರಿಗೆ ಮಾಸಿಕ 4,000 ರೂ ಮಾಸಿಕವಾಗಿ ಆರ್ಥಿಕ ನೆರವು (Financial assistance) ನೀಡುವುದಾಗಿ ಗೋವಾ ರಾಜ್ಯ ಸರ್ಕಾರ ಘೋಷಿಸಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತಿಯಲ್ಲಿ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗೋವಾ ರಾಜ್ಯ ಸಮಾಜ ಕಲ್ಯಾಣ ಸಚಿವ ಸುಭಾಷ ಫಳದೇಸಾಯಿ ಮಾತನಾಡಿ-21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆಯರಿಗೆ ಆರ್ಥಿಯ ಸಹಾಯ ಮಾಡುವ ಉದ್ದೇಶದಿಂದ ಯೋಜನೆಯಲ್ಲಿ ತಿದ್ಧುಪಡಿ ತರಲಾಗಿದೆ ಎಂದರು.
ಇದುವರೆಗೆ ಗೋವಾ ರಾಜ್ಯದಲ್ಲಿ ವಿಧವೆಯರು ಗೃಹ ಆಧಾರ (Girha Aadhar)ಯೋಜನೆಯಡಿ ಮಾಸಿಕ 1,500 ರೂ ಪಡೆಯಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ವಿಧವಾ ವೇತನವಾಗಿ (Widow’s pension) ಮಾಸಿಕ 2500 ರೂ ಪಡೆಯಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ಅರ್ಜಿ ಸಲ್ಲಿಸಬೇಕಿತ್ತು. ಇದೀಗ ಎರಡೂ ಯೋಜನೆಗಳನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ತರಲಾಗಿದೆ ಎಂದು ಸಚಿವ ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.