ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಭಾರತೀಯ ಮತ್ತು ವಿದೇಶಿಯರಿಗೆ ಯೋಗ ಶಿಕ್ಷಣ ನೀಡುತ್ತಿದ್ದ ಸ್ವಯಂಘೋಷಿತ ಯೋಗ ಗುರು ಛತ್ತೀಸ ಗಢದಲ್ಲಿ 2 ಕಿಲೊ ಗಾಂಜಾ ದೊಂದಿಗೆ ಪೋಲಿಸರು ಬಂಧಿಸಿದ್ದಾರೆ. ಈತನ ಹೆಸರು ಯೋಗಿ ತರುಣ ಕ್ರಾಂತಿ ಅಗ್ರವಾಲ್ ಉರ್ಫ ಸೋನು. ಈ ಯೋಗಗುರು ಬಂಧನದಿಂದ (Yogababa’s arrest) ಇವರ ಜೀವನಶೈಲಿ ಹಾಗೂ ಆರ್ಥಿಕತೆಯ ಕುರಿತು ಹಲವು ಪ್ರಶ್ನೆ ನಿರ್ಮಾಣವಾಗಿದೆ.
ಬಂಧಿತ ಈ ಯೋಗಗುರು ಬಾಬಾ ಯೋಗ ಶಿಕ್ಷಣ ನೀಡಲು 100 ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿದ್ದಾನೆ ಎನ್ನಲಾಗಿದೆ. ಛತ್ತೀಸಗಡದಲ್ಲಿ ಡೋಂಗರಗಡ ದೇವಸ್ಥಾನದ ಬಳಿ ಇದೇ ಬಾಬಾ 5 ಎಕರೆ ಜಮೀನು ಖರೀದಿಸಿದ್ದಾನೆ. ಅಲ್ಲಿ ಆಶ್ರಮ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದೇ ಪರಿಸರದಲ್ಲಿ ಮಾದಕ ಪದಾರ್ಥ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಪೋಲಿಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಪೋಲಿಸರು ಧಾಳಿ ನಡೆಸಿದ್ದರು.
ಬಂಧಿತ ಆರೋಪಿಯು ಬಂಧಿಸಿದ ಸಂದರ್ಭದಲ್ಲಿ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದ. ಗೋವಾದಲ್ಲಿ ದೇಶೀಯ ಮತ್ತು ವಿದೇಶಿಯ ನಾಗರಿಕರಿಗೆ ಯೋಗ ಶಿಕ್ಷಣ ನೀಡಿದ್ದ. ಈತ ವಿವಿಧ ದೇಶಗಳಲ್ಲಿ ಯೋಗ ಶಿಕ್ಷಣ ನೀಡಲು ಪ್ರವಾಸ ಮಾಡಿದ್ದ. ಹಲವು ಸ್ವಯಂಸೇವಾ ಸಂಸ್ಥೆ ನಡೆಸುತ್ತಿದ್ದ ಎನ್ನಲಾಗಿದೆ. ಪೋಲಿಸರು ಬಂಧಿತ ಅಗ್ರವಾಲನಿಂದ ಪಾಸ್ ಪೋರ್ಟ ಜಫ್ತಿ ಮಾಡಿದ್ದಾರೆ ಎನ್ನಲಾಗಿದೆ.