ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಜಾತಿ ಪ್ರಮಾಣಪತ್ರ ನೀಡದ ಕಾರಣ ಗೋವಾದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಜಾತಿ (Sc,St,Obc) ಮೀಸಲಾತಿಯಿಂದ ವಂಚಿತರಾಗಿದ್ದಾರೆ ಈ ಕುರಿತು ಗಡಿ ಅಭಿವೃದ್ಧಿ ಪ್ರಾಧಿಕಾರ ಮಧ್ಯ ಸ್ತಿಕೆ ವಹಿಸಿ ವಿಶೇಷ ಅಧಿಕಾರಿ ನೇಮಿಸಲು ಕರ್ನಾಟಕ ಸರ್ಕಾರವನ್ನು ಮನವಿ ಮಾಡುವಂತೆ ಗೋವಾದ ಜುವಾರಿನಗರ ಕನ್ನಡ ಸಂಘ ಮನವಿ ಮಾಡಿತ್ತು. ಈ ಕುರಿತು ತತಕ್ಷಣವೇ ಕ್ರಮ ತೆಗೆದುಕೊಂಡ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನೂಡಲ್ ಅಧಿಕಾ ರಿಯನ್ನು ನೇಮಕ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಪತ್ರ ಬರೆದಿತ್ತು. ಅದರಪರಿಣಾಮ ನೂಡಲ್ ಅಧಿಕಾರಿ ನೇಮಕಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡಿಗರು ಗೋವಾದಲ್ಲಿ ಸುಮಾರು 50 ವರ್ಷಗಳಿಂದ ಮತ್ತು ಕೆಲವರು ಜನ್ಮದಿಂದಲೆ ನೆಲೆಸಿದ್ದೇವೆ. ಗೋವಾದಲ್ಲಿಹೊರ ರಾಜ್ಯದಿಂದ ಬಂದಿರುವ ವಲಸೆ ನಿವಾಸಿಗಳಿಗೆ ಜಾತಿ ದಾಖಲಾತಿ ಪ್ರಮಾಣ ಪತ್ರ ಸಿಗುವದಿಲ್ಲ ಈ ರೀತಿಯಾಗಿ ಗೋವಾ ಸರ್ಕಾರ ವಿಧಾನಸೌದದಲ್ಲಿ ಸರ್ಕಾರ ಮಸೂದೆ ( ಬಿಲ್ಲ) ಪಾಸ ಮಾಡಿದೆ ಅಂದ್ರೆ ಗೋವಾ ಸ್ವಾತಂತ್ರ್ಯದ ಪೂರ್ವ (1961) ಮೊದಲು ಗೋವಾದಲ್ಲಿ ನೆಲೆ ನಿಂತಿರುವ ವಲಸೆ ನಿವಾಸಿ ಗಳಿಗೆ ಮಾತ್ರ ಜಾತಿ ಮಿಸಲಾತಿ ಪ್ರಮಾಣ ಪತ್ರ ನಿಡಬಹುದು. ಇಲ್ಲದಿದ್ದರೆ ಜಾತಿ ಪ್ರಮಾಣಪತ್ರ ನೀಡಲಾಗುವದಿಲ್ಲ. ಇದರಿಂದಾಗಿ ಕರ್ನಾಟಕದ ಪ್ರಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಿಂದೂಳಿದ ಮತ್ತು ಕೆಲವು ಸಾಮಾನ್ಯ ವರ್ಗದಲ್ಲಿ ಗುರುತಿಸಿ ಕೊಳ್ಳುವ ಎಷ್ಟೊ ಜನರು ಗೋವಾ ಸರ್ಕಾರ ಬಿಡಿ ಎಷ್ಟೊ ಕೇಂದ್ರ ಸರ್ಕಾರದ ಮಿಸಲಾತಿ ಸೌಲಬ್ಯ ಗಳಿಂದ ವಂಚಿತರಾಗಿದ್ದಾರೆ. ಇದರಲ್ಲಿ ವಿಶೇಷವಾಗಿ ಶಿಕ್ಷಣ ರಂಗದಲ್ಲಿ ಇರುವ ಎಷ್ಟೊ ಜಾತಿ ಮಿಸಲಾತಿ ಸೌಲಭ್ಯ. ವಂಚಿತರು ನಮ್ಮ ಕನ್ನಡಿಗರಾಗಿದ್ದಾರೆ ಈ ಕಡೆ ಗೋವಾ ಸರ್ಕಾರವು ವಲಸೆ ನಿವಾಸಿಗಳೆಂದು ತಿರಸ್ಕಾರ ಮಾಡುತ್ತಿದೆ. ಆಕಡೆ ಕರ್ನಾಟಕ ದಿಂದ ವಲಸೇ ಹೋಗಿದ್ದಿರಿ ಎಂದು ಕರ್ನಾಟಕ ಸರ್ಕಾರವು ತಿರಸ್ಕಾರ ಮಾಡುತ್ತಿದೆ. ಗೋವಾದಲ್ಲಿ ಜಾತಿ ಪ್ರಮಾಣ ಪತ್ರ ಸಿಗುವದಿಲ್ಲ ಎಂದು ತಮ್ಮ ತಮ್ಮ ಮೂಲ ಸ್ಥಳ ಕರ್ನಾಟಕದಲ್ಲಿ ಜಾತಿ ಮಿಸಲಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಅಲ್ಲಿನ ಅಧಿಕಾರಿಗಳು ನಿಮ್ಮ ಹತ್ತಿರ ಕರ್ನಾಟಕದ ದಾಖಲಾತಿ ಗಳು ಇಲ್ಲ ನಿಮಗೆ ಕರ್ನಾಟಕದಲ್ಲಿ ಕನಿಷ್ಠ ನಾಗರಿಕತ್ವ ಗುರುತಿನ ಚಿಟಿಗಳಾದ ಆಧಾರ ಮತ್ತು ಮತದಾರರ ಚಿಟಿ ಇದ್ದರೆ ಮಾತ್ರ ನೀಮಗೆ ಇಲ್ಲಿ ದಾಖಲಾತಿ ಗಳು ಸಿಗುವದಾಗಿ ತಿಳಿಸಿದ್ದಾರೆ. ಹೀಗಿರುವಾಗಿ ಎಷ್ಟೊ ಜನ ಬಡ ಕನ್ನಡಿಗರ ಮಕ್ಕಳು ಮಿಸಲಾತಿಯಿಂದ ವಂಚಿತಗೊಂಡು ಅವರ ಬದುಕು ಡೋಲಾಯಮಾನ ವಾಗಿ ಅತಂತ್ರ ಪರಿಸ್ಥಿತಿ ಅನು ಭವಿಸುತ್ತಿದ್ದಾರೆ. ವಿಶೇಷವಾಗಿ ಉನ್ನತಶಿಕ್ಷಣದ ವಿಷಯದ ಬಂದಾಗಹೆಚ್ಚಿನ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರ ಮಧ್ಯ ಸ್ತಿಕೆ ವಹಿಸಿ ಈ ರೀತಿಯ ವಿಶೇಷ ಕೆಸ ನಿರ್ವಹಣೆ ಮಾಡುವಸಲುವಾಗಿ ನೂಡಲ್ (ವಿಶೇಷ ಅಧಿಕಾರಿ) ನೇಮಕ ಆಯೋಜನೆ ಮಾಡಿ ಗೋವಾ ಕನ್ನಡಿಗರ ಈ ರೀತಿಯ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಮಾಡಿಕೊಡು ಬೇಕು ಎಂದು ಗೋವಾದ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ರವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಬಳಿ ಮನವಿ ಮಾಡಿತ್ತು. ಈ ಮನವಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಸ್ಫಂಧಿಸಿದೆ.
ಜಾತಿ ಸರ್ಟಿಫಿಕೆಟ್ ಕೊಡುವದಿಲ್ಲ....
ಸುಮಾರು ಮೂರುನಾಲ್ಕು ತಲೆಮಾರಿನಿಂದ ಗೋವಾ ದಲ್ಲಿ ಕನ್ನಡಿಗರು ಗೋವಾ ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಕೆಲವರು ಗೋವಾ ಸ್ವಾತಂತ್ರವಾದ ನಂತರ ಗೋವಾದಲ್ಲಿ ಸರ್ಕಾರ ರಚನೆಯಾದ ಮೇಲೆ ಸರ್ಕಾರ ನಡೆಸಲು ನುರಿತ ಮತ್ತು ಅನುಭವ ಹೊಂದಿದ ಅಧಿಕಾರಿ ಗಳನ್ನು ಗೋವಾ ಸರ್ಕಾರವು ನೆರೆಯ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಗಳಿಂ ಎರವಲು ಪಡೆದಿತ್ತು. ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ಒಬ್ಬ ಕೂಲಿ ಕಾರ್ಮಿಕ ನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ಕನ್ನಡಿಗರು ಗೋವಾಕ್ಕೆ ಹೊಟ್ಟೆ ಹೊರೆಯಲು ವಲಸೆ ಬಂದಿದ್ದರೂ.ಆದಾಗಿನಿಂದ ಹಿಡಿದು ಇದುವರೆಗೂ ಕನ್ನಡಿಗರು ಹೊರಹಾಜ್ಯದಿಂದ ವಲಸೆ ಬಂದ ವರು ಎಂದು ಜಾತಿ ಪ್ರಮಾಣಪತ್ರ ಸರ್ಕಾರ ಕೊಡುವದಿಲ್ಲ. ಈ ನಿಟ್ಟಿನಲ್ಲಿ ಅಂದಾಜು 1.5 ಲಕ್ಷ ಜನ ಕನ್ನಡಿಗರು ಜಾತಿ ಮಿಸಲಾತಿಯಿಂದ ವಂಚಿತರಾಗಿದ್ದಾರೆ. ಮಾನ್ಯ ಪ್ರಧಾನಮಂತ್ರಿಗಳ “ಸಭಕಾ ಸಾತ ಸಬಕಾ ವಿಕಾಸ “ಘೋಷ ವಾಕ್ಯಾಕ್ಕೆ ತದ್ವಿರುದ್ಧವಾಗಿ ಗೋವಾದಲ್ಲಿ ವಿವಿಧ ಪ್ರದೇಶವಾರು ಕೋರ್ತಾಲಿಂನಲ್ಲಿ 20 ಸಾವಿರ’, ಡಾಬೋಲಿಂನಲ್ಲಿ 15 ಸಾವಿರ, ವಾಸ್ಕೊದಲ್ಲಿ 15 ಸಾವಿರ ಮುರಗಂವನಲ್ಲಿ 12ಸಾವಿರ, ಮಡಗಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ 30 ಸಾವಿರ, ಪಣಜಿಸುತ್ತ ಮುತ್ತಲಿನ ಪ್ರದೇಶದಲ್ಲಿ 20 ಸಾವಿರ, ಮಾಪಸಾ ಭಾಗದಲ್ಲಿ 20 ಸಾವಿರ, ಬಿಚೋಲಿ ಭಾಗದಲ್ಲಿ 8 ರಿಂದ ಹತ್ತುಸಾವಿರ ಪೆÇಂಡಾ ಸುತ್ತಮುತ್ತ 8 ರಿಂದ ಹತ್ತು ಸಾವಿರ ಜನ ಕನ್ನಡಿಗರು ಜಾತಿ ಮಿಸಲಾತಿ ವಂಚಿತರಾಗಿದ್ದಾರೆ. ಇವರಿಂದ ಸಮಾಜದಲ್ಲಿ ಅಸಮತೋಲನ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕೊನೆ ಯಾವಾಗ…..? ಜಾತಿಗಣತಿಯಲ್ಲಿ ಬಡಪಾಯಿ ಕನ್ನಡಿಗರು ಲೆಕ್ಕಕಿಲ್ಲವೆ ? …ಸಭಕಾ ಸಾಥ ಸಭಕಾ ವಿಕಾಸ ಎಲ್ಲಿ?ಇದನ್ನು ಕೇಳುವವರುಯಾರು? ರಾಷ್ಟ್ರೀಯವಾದ ಎಲ್ಲಿ ಹೊಯಿತು ?….ಸಂವಿಧಾನಿಕ ಹಕ್ಕನ್ನು ಕಸಿಯಲಾಯಿತೆ ಹೀಗೆ ಹತ್ತು ಹಲವುಪ್ರಶ್ನೆಗಳು ಉದ್ಬವಿಸುತ್ತವೆ.