ಸುದ್ಧಿಕನ್ನಡ ವಾರ್ತೆ
ಗೋವಾ (Goa) ರಾಜ್ಯವು ಸುಂದರ ಪ್ರವಾಸಿ ತಾಣಗಳ ಮೂಲಕ ಜಗತ್ಪ್ರಸಿದ್ಧಿ ಪಡೆದಿದೆ. ಗೋವಾದಲ್ಲಿ ಬೀಚ್ ಗಳು ಪ್ರಮುಖ ಆಕರ್ಷಣೆಯಾಗಿದೆ. ಉತ್ತರ ಗೋವಾ ಮತ್ತು ದಕ್ಷಿಣ ಗೋವಾದಲ್ಲಿ ಹತ್ತಾರು ಪ್ರಸಿದ್ಧ ಬೀಚ್ ಗಳು ಹೆಚ್ಚಿನ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಉತ್ತರ ಗೋವಾದಲ್ಲಿರುವ ಫೇಮಸ್ ಬೀಚ್ (Beach)ಗಳು ದೇಶ-ವಿದೇಶಿಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಬೀಚ್ ನ ಸುಂದರ ಅನುಭವ ಪಡೆದುಕೊಳ್ಳಲು ಯಾರೆಲ್ಲ ಗೋವಾಕ್ಕೆ ಬರಲು ಇಚ್ಚಿಸಿದ್ಧೀರೊ ಅವರಿಗೆ ಉತ್ತರ ಗೋವಾದ ಬೀಚ್ ಗಳು ಫರ್ಫೆಕ್ಟ. ಶಾಪಿಂಗ್ ಪ್ರೀಯರಿಗಂತೂ ಉತ್ತರ ಗೋವಾ ಸ್ವರ್ಗ (Goa paradise) ಎಂದೇ ಹೇಳಬಹುದಾಗಿದೆ. ಹಾಗಿದ್ದರೆ ಇಲ್ಲಿ ಯಾವೆಲ್ಲ ಬೀಚ್ ಗಳು ಪ್ರಸಿದ್ಧಿ ಹೊಂದಿದೆ ಎಂದು ನೋಡೋಣ.

ಅಂಜುಣಾ ಬೀಚ್...
ಉತ್ತರ ಗೋವಾದಲ್ಲಿ ಈ ಬೀಚ್ ಹೆಚ್ಚು ಜನಪ್ರೀಯವಾಗಿದೆ. ಪಣಜಿಯಿಂದ ಸುಮಾರು 21 ಕಿಮಿ ದೂರದಲ್ಲಿದೆ. ಈ ಬೀಚ್ ಸಾಹಸಿಗಳನ್ನು ಆಕರ್ಷಿಸುತ್ತದೆ. ನೈಟ್ ಪಾರ್ಟಿಗಳಿಗಾಗಿ ಈ ಬೀಚ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬನಾನಾ ಬೋಟ್ ರೈಡಿಂಗ್, ಪ್ಯಾರಾಸೈಲಿಂಗ್, ವಾಟರ್ ಸ್ಕೂಟರ್, ಜೆಟ್ ಸ್ಟಿಯಿಂಗ್ ಗಳನ್ನು ಈ ಬೀಚ್ ನಲ್ಲಿ ಎಂಜಾಯ್ ಮಾಡಬಹುದಾಗಿದೆ. ಅಂಜುನಾ ಮಾರುಕಟ್ಟೆಯಲ್ಲಿ ಶಾಪಿಂಗ್ ಕೂಡ ಮಾಡಬಹುದಾಗಿದೆ.

ಬಾಗಾ ಬೀಚ್…
ಇದು ಗೋವಾದ ಮತ್ತೊಂದು ಪ್ರಸಿದ್ಧ ಬೀಚ್ ಆಗಿದೆ. ಬಾಗಾ ಬೀಚ್  (Baaga Beach) ಪಣಜಿಯಿಂದ ಸುಮಾರು 30 ಕಿಮಿ ದೂರದಲ್ಲಿದೆ. ಸೂರ್ಯಾಸ್ತದ ಸಂದರ್ಭದಲ್ಲಿ ಸುಂದರ ನಯನಮನೋಹರ ದೃಶ್ಯಗಳಿಂದ ಈ ಬೀಚ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಂಗಾತಿಗಳಿಗೆ ಈ ಬೀಚ್ ಸಕತ್ ರೊಮ್ಯಾಂಟಿಕ್ ಎಂದೇ ಹೇಳಬಹುದಾಗಿದೆ. ಬಾಗಾ ಬೀಚ್ ಕೂಡ ಸಾಹಸ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸ್ಥಳ,

ಕಲಂಗುಟ್ ಬೀಚ್…
ಕಲಂಗುಟ್ ಬೀಚ್ (Calangut Beach) ಉತ್ತರ ಗೋವಾದ ಅತ್ಯಂತ ಪ್ರಸಿದ್ಧ ಬೀಚ್ ಗಳಲ್ಲಿ ಒಂದು. ಕಲಂಗುಟ್ ಬೀಚ್ ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿಮಿ ದೂರದಲ್ಲಿದೆ. ಈ ಬೀಚ್ ಅತಿ ಉದ್ಧನೆಯ ಬೀಚ್. ಕಲಂಗುಟ್ ಬೀವ್ ನಲ್ಲಿ ಎಲ್ಲ ತರಹದ ಜಲಕ್ರೀಡೆಗಳು ಲಭ್ಯವಿರುವುದರಿಂದ ಗೋವಾಕ್ಕೆ ಬಂದ ಪ್ರವಾಸಿಗರು ಯಾರೂ ಕೂಡ ಈ ಬೀಚ್ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಉದ್ಧನೆಯ ಬೀಚ್ ದೇಶ-ವಿದೇಶಿಯ ಪ್ರವಾಸಿಗರ ಆಕರ್ಷಣೆಯ ತಾಣವಂತೂ ನಿಜ.
ಇವಿಷ್ಟೇ ಅಕಲ್ಲದೆಯೇ ಉತ್ತರ ಗೋವಾದಲ್ಲಿ ಚಪೋರಾ ಬೀಚ್, ಮೀರಾಮಾರ್ ಬೀಚ್, ಮಾಂದ್ರೆಮ್ ಬೀಚ್, ಕಾಂದೋಳಿಮ್ ಬೀಚ್, ಸಿಕೇರಿ ಬೀಚ್, ದೋನಾ ಪೌಲಾ, ಹರ್ವಳೆ ಪಾಲ್ಸ, ಆಶ್ವೆಮ್ ಬೀಚ್ ಗಳು ಕೂಡ ಹೆಚ್ಚಿನ ಪ್ರಸಿದ್ಧಿ ಪಡೆದಿವೆ. ನೀವು ಉತ್ತರಗೋವಾಕ್ಕೆ ಭೇಟಿ ನೀಡಿದರೆ ಇದ್ಯಾವುದೂ ತಾಣವನ್ನು ಮಿಸ್ ಮಾಡಬೇಡಿ.

ಕ್ರೂಜ್ ಬೋಟ್ ಆಕರ್ಷಣೆ…
ಸಂಜೆಯ ವೇಳೆಗೆ ಗೋವಾ ರಾಜಧಾನಿ ಪಣಜಿಯಲ್ಲಿ ಕ್ರೂಜ್ ಬೋಟ್ ಪ್ರಮುಖ ಆಕರ್ಷಣೆಯಾಗಿದೆ. ಕ್ರೂಜ್ ಬೋಟ್  (Cruise boat) ಮೂಲಕ ಒಂದು ಗಂಟೆಯವರೆಗೆ ಮಾಂಡವಿ ನದಿಯಿಂದ ಮೀರಾಮಾರ್ ಸಮುದ್ರದ ಬರೆಗೂ ಪ್ರಯಾಣ ಮಾಡಿ ಬರಬಹುದು. ಇದು ಒಂದು ಸುಂದರ ಅನುಭವ ನೀಡುತ್ತದೆ.

ಆಗುಂದಾ ಕೋಟೆ….
ಉತ್ತರ ಗೋವಾದಲ್ಲಿ ಆಗುಂದಾ ಕೋಟೆ ಅತ್ಯಂತ ಜನಪ್ರೀಯತೆ ಪೊಡೆದುಕೊಂಡಿದೆ. ಮಾಂಡವಿ ನದಿ ಮತ್ತು ಅರಬ್ಬಿ ಸಮುದ್ರದ  (arabian sea) ಸಂಗಮದಲ್ಲಿ ನೆಲೆಗೊಂಡಿರುವ ಆಗುಂದಾ ಕೋಟೆ 17 ನೇಯ ಶತಮಾನಕ್ಕೆ ಸೇರಿದ ಪೋರ್ಚುಗೀಸರ ಕಾಲದ ದೊಡ್ಡ ಕೋಟೆ ಇದಾಗಿದೆ.
ಗೋವಾ ರಾಜಧಾನಿ ಪಣಜಿಯಿಂದ ಆಗುಂದಾ ಕೋಟೆ (Agunda Fort)  19 ಕಿಮಿ ದೂರದಲ್ಲಿದೆ. ಈ ಕೋಟೆಯಿಂದ ಸೂರ್ಯಾಸ್ತ ವೀಕ್ಷಣೆ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.