ಸುದ್ದಿಕನ್ನಡ ವಾರ್ತೆ
Goa /Belagavi: ಕಳೆದ ಕೆಲ ದಿಮಗಳಿಂದ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಆನಮೋಡ ಘಾಟ್ ನಲ್ಲಿ ಬೃಹತ್ ಮರವೊಂದು ಬಿದ್ದು ಹಲವು ಸಮಯದ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗುವಂತಾಗಿದೆ. ಅತ್ತ ಚೋರ್ಲಾ ಘಾಟ್ ನಲ್ಲಿ ಸೇತುವೆ ಕೊಚ್ಚಿಹೋಗಿದ್ದರಿಂದ ಆ ಮಾರ್ಗ ಕೂಡ ಸಂಪೂರ್ಣ ಬಂದ್ ಆಗಿರುವುದರಿಂದ ವಾಹನಸವಾರರು ಹೆಚ್ಚಿನ ತೊಂದರೆ ಅನುಭವಿಸುವಂತಾಯಿತು.
ಆನಮೋಡ ಘಾಟ್ ರಸ್ತೆ ಚೋರ್ಲಾ ಘಾಟ್ ನಂತೆಯೇ ಗೋವಾ-ಕರ್ನಾಟಕ ಸಂಪರ್ಕಿಸುವ ರಸ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಚೋರ್ಲಾ ಘಾಟ್ ಮಾರ್ಗದಲ್ಲಿ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿ ಸಂಪೂರ್ಣ ಮಾರ್ಗ ಬಂದ್ ಆಗಿತ್ತು. ಸೋಮವಾರ ರಾತ್ರಿ ಅನಮೋಡ ಘಾಟ್ ರಸ್ತೆಯಲ್ಲಿ ಬೃಹತ್ ಮರ ಬಿದ್ದಿದ್ದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಈ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಕೆಲ ಗಂಟೆಗಳ ನಂತರ ಈ ಮರ ತೆರವುಗಿಒಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.