ಸುದ್ದಿಕನ್ನಡ ವಾರ್ತೆ
Goa: ಕರ್ನಾಟಕದಿಂದ ಗೋವಾಕ್ಕೆ ಬಂದು ನೆಲೆಸಿರುವ ಲಕ್ಷಾಂತರ ಕನ್ನಡಿಗರ ಪೈಕಿ ಹಲವರು ಕರ್ನಾಟಕ ಮತ್ತು ಗೋವಾ ಎರಡೂ ರಾಜ್ಯಗಳಲ್ಲಿ ರೇಷನ್ ಕಾರ್ಡ ಹೊಂದಿದ್ದರು. ಆದರೆ ಇದೀಗ ಗೋವಾದಲ್ಲಿ ರೇಷನ್ ಕಾರ್ಡ ಆನ್ ಲೈನ್ ನೋಂದಣಿಯಾಗಿರುವುದರಿಂದ ಯಾವುದಾದರೂ ಒಂದು ರಾಜ್ಯದ ರೇಷನ್ ಕಾರ್ಡ ಮಾತ್ರ ಉಳಿದುಕೊಳ್ಳಲಿದ್ದು ಇನ್ನೊಂದು ಕಾರ್ಡ ರದ್ದಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ರೇಷನ್ ಕಾರ್ಡ ಆನ್ ಲೈನ್ ಮತ್ತು ಆಧಾರ ಕಾರ್ಡ ಲಿಂಕ್ ಮಾಡಲಾಗಿತ್ತು. ಆದರೆ ಗೋವಾದಲ್ಲಿ ಈ ಪ್ರಕ್ರಿಯೆ ಇತ್ತೀಚೆಗಷ್ಟೇ ಆರಂಭಗೊಂಡಿದೆ. ಕರ್ನಾಟಕದಿಂದ ಗೋವಾಕ್ಕೆ ವಲಸೆ ಬಂದಿರುವ ಅದೆಷ್ಟೋ ಕುಟುಂಬಗಳಿಗೆ ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳಲ್ಲಿಯೂ ರೇಷನ್ ಕಾರ್ಡ ಇತ್ತು. ಆದರೆ ಇದೀಗ ಗೋವಾದಲ್ಲಿಯೂ ಆನ್ ಲೈನ್ ಮತ್ತು ಆಧಾರ್ ಲಿಂಕ್ ಮಾಡುತ್ತಿರುವುದರಿಂದ ಡಬಲ್ ರೇಷನ್ ಕಾರ್ಡ ನಲ್ಲಿ ಒಂದು ಕಾರ್ಡ ರದ್ದಾಗಲಿದೆ.
ಹಲವು ಕನ್ನಡಿಗ ಕುಟುಂಬಗಳು ಗೋವಾಕ್ಕೆ ಬಂದು ನೆಲೆಸಿದರೂ ಕೂಡ ಕರ್ನಾಟಕದಲ್ಲಿ ತಮ್ಮ ಮನೆ ಆಸ್ತಿಯನ್ನು ಹೊಂದಿರುವಂತೆಯೇ ಅಲ್ಲಿಯ ರೇಷನ್ ಕಾರ್ಡ ಕೂಡ ಹೊಂದಿದ್ದರು. ಆದರೆ ಇದೀಗ ಒಂದು ರೇಷನ್ ಕಾರ್ಡ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.