ಸುದ್ಧಿಕನ್ನಡ ವಾರ್ತೆ
Goa: ಗೋವಾದ ಮಡಗಾಂವ ಕೊಂಕಣ ರೈಲ್ವೆ ಸ್ಟೇಶನ್ ಪರಿಸರ, ರಾವಣಫೊಂಡ, ಪವರ್ ಹೌಸ್, ಮಾರುತಿ ಮಂದಿರ, ಕುಡತರಿ, ರಾಯಾ ಈ ಭಾಗಕ್ಕೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಪ್ರಾಣದಲ್ಲಿ ಜಕಸದ ರಾಶಿ ಕಂಡುಬರುತ್ತದೆ. ಕಸದ ರಾಶಿ ಕಂಡರೆ ಇಷ್ಟೊಂದು ಕಸ ಎಲ್ಲಿಂದ ಬರುತ್ತದೆ..? ಎಂಬ ಪ್ರಶ್ನೆ ಮೂಡುವುದಂತೂ ಸತ್ಯ. ರಸ್ತೆಯ ಬದಯಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ಸರ್ಕಾರ ಎಚ್ಚರಿಕೆ ನೀಡಿದ್ದರೂ ಕೂಡ ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುತ್ತಿರುವುದು ಕಂಡುಬರುತ್ತಿದೆ.
ಮಡಗಾಂವ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಊರುಗಳಲ್ಲಿ ಬೃಹತ್ ಪ್ರಮಾಣದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಸರದ ರಾಶಿ ಕಂಡುಬರುತ್ತಿದೆ. ಇಷ್ಟೋಂದು ಪ್ರಮಾಣದಲ್ಲಿ ಕಸವನ್ನು ಯಾರು ಎಸೆದು ಹೋಗುತ್ತಾರೆ ಎಂಬುದು ಮಾತ್ರ ಪ್ರಶ್ನೆಯಾಗಿದೆ. ರಸ್ತೆಯ ಪಕ್ಕದಲ್ಲಿ ಕಸ ಎಸೆದು ಹೋಗುವವರ ವಾಹನ ಜಫ್ತಿ ಮಾಡಿ ಅವರಿಗೆ ದಂಡ ವಿಧಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಆದೇಶ ಹೊರಡಿಸಿದ್ದರೂ ಕೂಡ ಜನತೆ ಎಚ್ಚೆತ್ತುಕೊಳ್ಳದೆಯೇ ಇರುವುದು ಮಾತ್ರ ಕಂಡುಬರುತ್ತಿದೆ. ಆದರೆ ಈ ರೀತಿ ಕಸ ಎಸೆಯುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ..? ಎಂಬುದು ಜನತೆಯ ಪ್ರಶ್ನೆಯಾಗಿದೆ.