ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯದಲ್ಲಿ ಸೋಮವಾರದಿಂದ ಕೊಂಚ ಬಿಸಿಲಿನ ವಾತಾವರಣ ಕಂಡುಬರುತ್ತಿದ್ದು ಆಗಾಗ ಮಳೆಯಾಗುತ್ತಿದೆ. ಗಾಳಿಯ ವೇಗವೂ ಕೂಡ ಕಡಿಮೆಯಾಗಿದೆ. ಹವಾಮಾನ ಇಲಾಖೆಯು ಮೂರು ದಿನಗಳ ಕಾಲ ಆರೆಂಜ್ ಅಲರ್ಟ ಜಾರಿಗೊಳಿಸಲಾಗಿದೆ. ಮೇ 29 ರವರೆಗೆ ಗೋವಾ ರಾಜ್ಯದಲ್ಲಿ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗೋವಾ ರಾಜ್ಯದಲ್ಲಿ ಮೇ 29 ರ ವರೆಗೆ ಆರೆಂಜ್ ಅಲರ್ಟ, ಮೇ 30 ರಿಂದ ಜೂನ್ 2 ವರೆಗೆ ಯಲ್ಲೊ ಅಲರ್ಟ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಮಧ್ಯಮ ರೀತಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗೋವಾ ರಾಜ್ಯದಲ್ಲಿ ಜೂನ್ 1 ರಿಂದ 61 ದಿನಗಳ ವರೆಗೆ ಮೀನುಗಾರಿಕೆಗೆ ನಿರ್ಬಂಧ ಹೇಲಾಗಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಹಲವೆಡೆ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಸುಮಾರು 9 ಲಕ್ಷ ಹಾನಿ ಸಂಭವಿಸಿದೆ. ಸರ್ವೆ ನಡೆಸಿ ನಷ್ಠಕ್ಕೆ ಪರಿಹಾರ ನೀಡುವುದಾಗಿ ಕೃಷಿ ಸಚಿವ ರವಿ ನಾಯ್ಕ ಭರವಸೆ ನೀಡಿದ್ದಾರೆ.