ಸುದ್ದಿಕನ್ನಡ ವಾರ್ತೆ
Goa : ಗೋವಾದ ಪರ್ವರಿ ಪ್ಲೈ ಓವರ್ ನಿರ್ಮಾಣ ಕಾರ್ಯದಿಂದಾಗಿ ಈ ಭಾಗದಲ್ಲಿ ಪ್ರತಿದಿನ ಭಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಈ ಭಾಗದ ರಸ್ತೆಯಲ್ಲಿ ಭಾರಿ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ.
ಫ್ಲೈಓವರ್ ನಿರ್ಮಾಣದಿಂದಾಗಿ ಗಿರಿಯಿಂದ ಪಣಜಿಗೆ ಆಗಮಿಸಲು ತಾಸುಗಟ್ಟಲೆ ಟ್ರಾಫಿಕ್ ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಒಂದೂವರೆ ಕಿಲೋಮೀಟರ್ ಕ್ರಮಿಸಲು ಅರ್ಧಗಂಟೆಗೂ ಹೆಚ್ಚುಕಾಲ ತಗುಲಲಿದೆ.