ಸುದ್ದಿ ಕನ್ನಡ ವಾರ್ತೆ
ಪಣಜಿ: ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ವಿಭಾಗದ ಕರಂಜೋಲ್ ಮತ್ತು ಕ್ಯಾಸಲ್ ರಾಕ್ ನಡುವೆ ಮೇ 25ರಂದು ರೈಲು ಸಂಖ್ಯೆ 17310 ಒಂದು ಭೋಗಿ ಹಳಿ ತಪ್ಪಿದ ಘಟನೆ ನಡೆದಿದೆ. ಈ ಘಟನೆಯಿಂದ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ರೈಲು ಸೇವೆ ಪುನರಾರಂಭಗೊಂಡಿದೆ. ಪ್ರಯಾಣಿಕರಿಗೆ ಲೊಂಡಾ ದಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಳೆದ ಭಾನುವಾರ ಬೆಳಿಗ್ಗೆ ಸಂಭವಿಸಬಹುದಾದ ಬಹುದೊಡ್ಡ ದುರಂತ ಒಂದು ಸಣ್ಣದರಲ್ಲಿಯೇ ತಪ್ಪಿದಂತಾಗಿದೆ. ವಾಸ್ಕೋಡಗಾಮ ಯಶವಂತಪುರ ರೈಲು ಹಳಿ ತಪ್ಪಿದ್ದು ಅದೃಷ್ಟವಶಾತ್ ಆ ರೈಲಿನ ಭೋಗಿಯಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ.
ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ಈ ಘಟನೆ ಸಂಭವಿಸಿದೆ. ಮೇ 25 ರಂದು ಬೆಳಗಿನ ಜಾವ ಎರಡು ಗಂಟೆ 30 ನಿಮಿಷಕ್ಕೆ ಈ ಘಟನೆ ಸಂಭವಿಸಿದೆ. ರೈಲು ಭೋಗಿ ಸಂಖ್ಯೆ 2 1 6 3 85 ಸಂಪೂರ್ಣವಾಗಿ ಖಾಲಿ ಇತ್ತು.
ಈ ಘಟನೆಯಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯಕ್ತಿಯ ಉಂಟಾಗಿದೆ. ಇನ್ನುಳಿದ ಭೋಗಿಯಲ್ಲಿದ್ದ ಸುಮಾರು 1000 ಜನ ಪ್ರಯಾಣಿಕರಿಗೆ ಲೋಂಡ ನಿಲ್ದಾಣದಲ್ಲಿ ಚಹಾ ಮತ್ತು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.